ಚೆಲುವೆಯೆ ನಿನ್ನ ನೋಡಲು

ಹೊಸ ಬೆಳಕು
ಡಾ|| ರಾಜ್ ಕುಮಾರ್
ಚಿ. ಉದಯಶಂಕರ್

ಚೆಲುವೆಯೆ ನಿನ್ನ ನೋಡಲು ಮಾತುಗಳು ಬರದವನು

ಬರೆಯುತ ಹೊಸ ಕವಿತೆಯ ಹಾಡುವ ನೋಡಿ ಅಂದವನು || ಪ ||

ನೀ ನಗುತಿರೆ ಹೂವು ಅರಳುವುದು

ನೀ ನಡೆದರೆ ಲತೆಯು ಬಳುಕುವುದು

ಆ... ಆ... ಆ... ಆ... ಪನಿಸರಿಸನಿ ಮಪನಿಸನೆದ

ದಪಗಾಮಪ ಗಮಪಸಾ ಗಮಪಸಾ ಗಮಪಸಾ

ನೀ ನಗುತಿರೆ ಹೂವು ಅರಳುವುದು

ನೀ ನಡೆದರೆ ಲತೆಯು ಬಳುಕುವುದು

ಪ್ರೇಮ ಗೀತೆ ಹಾಡಿದಾಗ ಪ್ರೇಮಗೀತೆ ಹಾಡಿದಾಗ

ಕೋಗಿಲೆ ಕೂಡ ನಾಚುವುದು || 1 ||

ಈ ಸಂತಸ ಎಂದು ಹೀಗೆ ಇರಲಿ

ಈ ಸಂಭ್ರಮ ಸುಖವ ತುಂಬುತ ಬರಲಿ

ಆಆ... ಆ.. ಆಆಆ... ಪನಿಸರಿಸನಿ ಮಪನಿಸನೆದ

ದಪಗಾಮಪ ಗಮಪಸಾ ಗಮಪಸಾ ಗಮಪಸಾ

ಈ ಸಂತಸ ಎಂದು ಹೀಗೆ ಇರಲಿ

ಈ ಸಂಭ್ರಮ ಸುಖವ ತುಂಬುತ ಬರಲಿ

ಇಂದು ಬಂದ ಹೊಸ ವಸಂತ ಇಂದು ಬಂದಾ ಹೊಸ ವಸಂತ

ಕನಸುಗಳಾ ನನಸಾಗಿಸಲಿ || 2 ||

ಹೊಸ ಬೆಳಕು

ಚಿತ್ರ ನೋಡಿ