ಕಣ್ಣ ಮುಚ್ಚೆ
ಉಳಿದವರು ಕಂಡಂತೆಕಣ್ಣ ಮುಚ್ಚೆ ಮಡಿಲ ಆಚೆ
ದಾಟಿ ಹೋದೆ ಬೆಳಕನ್ನು
ಹಾರಿ ಹೋದ ಅದೆಂಥ ಬಾನು
ಕಾಣದೆನು ಹೆತ್ತ ಹೆಣ್ಣು ಒಣಗಿದೆ ಕೈ ಬೆರಳು
ಕೈ ತುತ್ತನು ನೀ ಮರೆಯಲು ನಾ ಜೀಕಿ ಹೋದೆ
ಬೆಳೆದ ಮರವೊಂದು ತನ್ನ ಬೇರನ್ನ ತಾನೆ ಕಾಣ ಬಯಸಿದೆ
ಮುಗಿಲ ಕಾಣುವ ಹಕ್ಕಿ ಮರಿಯೊಂದು
ತಾಯಿಯ ಗೂಡನ್ನು ಅರಸಿದೆ
ಪುಟ್ಟ ಹೆಜ್ಜೆ ಸುಳಿವು ನೀ ಕಂಡರೆ ಉಳಿವು
ಮತ್ತೆ ಗರ್ಭಕೆ ಹೋಗೋ ಬೇಡಿಕೆ
ಪ್ರಸವ ಬೇನೆ ಇರದ ಜನುಮ ಎನಗೆ
ಹುಡುಕಿದೆ ಹೆತ್ತ ಕಂಗಳು
ಸ್ವರ ಸೇರಲು ಮನ ಮುಗಿಲು
ನಾ ಜಿನುಗಿ ಬಂದೆ, ಅಮ್ಮಾ....
ತಾಯಿಯ ಅಪ್ಪುಗೆ ಬೆಳೆದ ಮರವಾಗಿ ನಿಂತಲ್ಲೆ ತಲೆಬಾಗಿ
ಈ ಭೂಮಿ ಮೀಟಿ ಸ್ವರ್ಗವನ್ನೇ ಮತ್ತೆ ಚಿಗುರಿಸಿದೆ
ಹಕ್ಕಿಗೆ ಬಾನಾಗಿ ಹಾರಲು ಒಲವಾಗಿ
ಮಡಿಲಲ್ಲೆ ಆಗಸ ತೋರಿತು ನಿನ್ನ ಮಮತೆಯ ಒಲವಾಗಿ
ಸೇರಿದ ಈ ಹೊತ್ತಿಗೆ ಕೈ ಬೆರಳಿನ ಆ ತುತ್ತಿಗೆ
ಆ ದೇವರಿಗೆ ಶರಣು ಆ...ಆ... ಅಮ್ಮಾ...
ಉಳಿದವರು ಕಂಡಂತೆ
ಚಿತ್ರ ನೋಡಿ