ಎಲ್ಲೋ ಜಿನುಗಿರುವ ನೀರು
ಜಸ್ಟ್ ಮಾತ್ ಮಾತಲ್ಲಿಎಲ್ಲೋ ಜಿನುಗಿರುವ ನೀರು
ಎಲ್ಲೋ ಝರಿಯಾಗಿ ಹರಿದು
ಎಲ್ಲೋ ಸಾಗರವ ಸೇರೊ ಪ್ರೀತಿ ಏನಿದು
ಎಲ್ಲೋ ರವಿ ಬರುವ ಸಮಯ
ಎಲ್ಲೋ ಹೂ ಅರಳೋ ಸರಸ
ಎಲ್ಲೋ ಚಿಲಿಪಿಲಿಯ ಬಾವವೂ
ಮುಂಜಾನೆ ಮಂಜು ಹನಿ ಭೂಮಿಯಲಿ
ತಂಪಾಗಿ ತೀಡಿರುವ ಪ್ರೇಮ
ಕೆಂಪಾದ ಕಿರಣ ತುಸು ಹಾಯಾಗಿ
ಭುವಿ ಮುತ್ತಿಟ್ಟ ಕಿವಿಗೊಟ್ಟೊ ಪ್ರೇಮ|| ಪ ||
ಪ್ರೇಮ ಓ ಅದು ಹೆಂಗಂತಂದ್ರೆ ಹ್ಯೊಳಕ್ ಬರ್ತೈತೆ
ಜಸ್ಟ್ ಮಾತ್ ಮಾತಲ್ಲಿ ಗೊತ್ತಿಲ್ದಂಗೆ ಮನಸ್ನಲ್ ಮೂಡ್ತೈತೆ
ಬರಡಾದ್ ಕಾಲ್ಗೆ ಬಾಣ್ಣಾನ್ ಸುರ್ಸಿ ರಂಗನ್ ಚೆಲ್ತೈತೆ
ಈ ಸುಖವಲ್ ಮೆಲ್ದೋಗ್ತಿದ್ರೆ ಬದುಕು ವ್ಯರ್ಥ ಅನಿಸ್ತೈತೆ
ಬೆಳ್ಳಿ ಬೆಳಕನ್ನು ಹೀರಿ ಸೊಂಪಾಗಿ ಹೂ ಬಿರಿದು
ನಕ್ಕಂತ ನಗುವಲ್ಲಿ ಪ್ರೇಮ
ಹಚ್ಚ ಹಸಿರನ್ನು ತೂರಿ ಕಂಪಾಗಿ ಹೂ ನಗಲು
ಪರಿಮಳವೇ ಹೊನಲಾಗಿ ಪ್ರೇಮ
ದಿನ ಬೆಳಗಿನಲಿ ಸವಿಗನಸುಗಳು
ಚೀಕಾಡೊ ಒಲವಿದು ಪ್ರೇಮ
ಹೊಸ ಲೋಕದಲಿ ಹೊಸ ಬಾವಗಳು
ನಲಿನಲಿಯುತ್ತ ಜಿಗಿದಿದೆ ಪ್ರೇಮ
ಮೋಹನ ಯಾರಿವ ನನ್ನೀ ಮನ ಸೆಳೆದವ
ನನ್ನನ್ನೇ ನಂಬಲಾಗದ ಸಂಗೀತದ
ಅಲೆಯಲ್ಲಿ ತೇಲಿ ಹೋದೆ ನಾ
ಕಾದಿದೆ ನವಿಲು ಕಾರ್ಮೋಡ ಬರಲು
ಹರಡಲು ತನ್ನ ಗರಿಯು
ಕಾಣಲು ಒಲವಿನ ರಂಗು ಬಾನಲು
ಎಲ್ಲೆಲ್ಲಿ ಜಾಜಿ ಮಲ್ಲೆ ಹೂವ ಸಾಲು ಅಲ್ಲಲ್ಲಿ
ಒಲವಿನ ಮಾಲೆ
ಕಂಪಲ್ಲಿ ಕಾವ್ಯದಲ್ಲಿ ಮೌನದಲ್ಲಿ ಮಾತಲ್ಲಿ
ಅರಿಯೆ ನಾ ಪ್ರೇಮದ ಲೀಲೆ ಎಎ..
ಜಸ್ಟ್ ಮಾತ್ ಮಾತಲ್ಲಿ
ಚಿತ್ರ ನೋಡಿ