ಆಡಿಸಿ ನೋಡು ಬೀಳಿಸಿ ನೋಡು
ಕಸ್ತೂರಿ ನಿವಾಸ ಪಿ. ಬಿ. ಶ್ರೀನಿವಾಸ್
ಚಿ. ಉದಯಶಂಕರ್
ಜಿ. ಕೆ. ವೆಂಕಟೇಶ್
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೆ ಬರಳಿ ಯಾರಿಗು ಸೋತು ತಲೆಯ ಬಾಗದು
ಎಂದಿಗು ನಾನು ಹೀಗೆ ಇರುವೆ ಎಂದು ನಗುವುದು
ಹೀಗೆ ನಗುತಲಿರುವುದು || ಪ ||
ಗುಡಿಸಲೆ ಆಗಲಿ ಅರಮನೆಯಾಗಲಿ ಆಟ ನಿಲ್ಲದು
ಹಿರಿಯರೆ ಇರಲಿ ಕಿರಿಯರೆ ಬರಲಿ ಭೇದ ತೋರದು
ಕಷ್ಟವೋ ಸುಖವೋ ಅಳುಕದೆ ಆಡಿ ತೂಗುತಿರುವುದು
ತೂಗುತಿರುವುದು || ೧ ||
ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು
ತಾನೇ ಉರಿದರು ದೀಪವು ಮನೆಗೆ ಬೆಳಕತರುವುದು
ದೀಪ ಬೆಳಕತರುವುದು|| ೨ ||
ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೇ
ಆತನ ಕರುಣೆಯೆ ಜೀವವ ತುಂಬಿ ಕುಣಿಸಿ ನಲಿಸಿದೇ
ಆ ಕೈ ಸೋತರೆ ಬೊಂಬೆಯ ಕಥೆಯು
ಕೊನೆಯಾಗುವುದೇ || ೩ ||ಕಸ್ತೂರಿ ನಿವಾಸ
ಚಿತ್ರ ನೋಡಿ