ಕೆಮ್ಮೀಸೆಯ ಪಿಕಳಾರ ಮಲೆನಾಡಿನ ಕಾಡುಗಳಲ್ಲಿ ಹಾಗೂ ಮನುಷ್ಯ ವಾಸ ಸ್ಥಾನಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುವಬರುವ ಹಕ್ಕಿ. ಇದು ಗತ್ರದಲ್ಲಿ ಗುಬ್ಬಿಗಿಂತ ದೊಡ್ಡದಿದ್ದು, ಮೈನಾ ಹಕ್ಕಿಗಿಂತ ಚಿಕ್ಕದಿದ್ದು ಸುಮಾರಿ 20 ಸೆಂ.ಮೀ. ಇರುತ್ತದೆ.
ಚೋರೆ ಹಕ್ಕಿ, ಭಾರತ ಉಪಖಂಡ ಹಾಗೂ ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಪಾರಿವಾಳದ ಜಾತಿಗೆ ಸೇರಿದ ಹಕ್ಕಿ. ಇದು ಗಾತ್ರದಲ್ಲಿ ಪಾರಿವಾಳಗಳಿಗಿಂತ ಚಿಕ್ಕದಿದ್ದು, ಕಡು ಬೂದು ಬಣ್ಣದ ಉದ್ದ ಬಾಲ ಹೊಂದಿರುತ್ತದೆ. ಇದರ ಉದ್ದ 28 ರಿಂದ 32 ಸೆಂಟಿಮೀಟರ್ (11.2 - 12.8 ಇಂಚು) ಇರುತ್ತದೆ.
ಕೈರಾತಗಳು ಏಷ್ಯಾದ ಉಷ್ಣವಲಯದಲ್ಲಿ ಕಂಡುಬರುವ, ಕೋಗಿಲೆ ಜಾತಿಗೆ ಸೇರಿದ ಪಕ್ಷಿಗಳಾಗಿವೆ. ಇಂಗ್ಲೀಷ್ ನಲ್ಲಿ ಇವುಗಳನ್ನು 'ಮಲ್ಕೋಹ'(Malkoha) ಗಳೆಂದು ಕರೆಯಲಾಗುತ್ತದೆ. ಈವರೆಗೆ 9 ಬಗೆಯ ಕೈರಾತಗಳನ್ನು ಗುರುತಿಸಲಾಗಿದೆ, ಅವುಗಳಲ್ಲಿ ನೀಲಿ ಮುಖದ ಕೈರಾತಗಳು ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಕಾಣಸಿಗುತ್ತವೆ.
ಬುದ್ಧಿ ಬಾರದವನಿಗೆ ಬುದ್ಧಿ ಇಲ್ಲದವನು ಹೇಳುವ ಮಾತು.