ಗಿರೀಶ್ ಕಾರ್ನಾಡ್

Girish Karnad

ಜ್ಞಾನಪೀಠ ಪ್ರಶಸ್ತಿ ಪಡೆದ ಏಳನೇಯ ಕನ್ನಡಿಗರಾದ ಗಿರೀಶ್ ಕಾರ್ನಾಡರು, ಕನ್ನಡದ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರು. ಬಹುಮುಖ ಪ್ರತಿಭೆಯ ಗಿರೀಶ್ ಕಾರ್ನಾಡರು ಕನ್ನಡದಲ್ಲಿ ಹೊಸ ಅಲೆಯ ನಾಟಕಗಳನ್ನು ರಚಿಸಿ, ರಂಗಪ್ರಯೋಗ ಮಾಡಿದ್ದಲ್ಲದೆ, ನಾಟಕ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಅನೇಕ ಕಲಾತ್ಮಕ ಚಿತ್ರಗಳಲ್ಲಿ ಅಭಿನಯ, ಚಿತ್ರಕಥೆ, ಸಂಭಾಷಣೆ ನೀಡಿ ಅನೇಕ ಪ್ರಶಸ್ತಿ ಗೌರವಗಳಿಗೆ ಭಾಜನದಾಗಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಲ್ಲದೆ ನಿರ್ದೇಶನ ಕೂಡ ಮಾದಿದ್ದಾರೆ. ದೂರದರ್ಶನದ ಧಾರಾವಾಹಿಗಳಲ್ಲಿ ಅಭಿನಯಿಸಿ, ನಿರ್ದೇಶಿಸಿ ಜನಪ್ರಿಯತೆ ಗಳಿಸಿದ್ದಾರೆ.

ಕಾರ್ನಾಡ್‍ರವರು ಈವರೆಗೆ ವಿವಿಧ ಭಾಷೆಗಳಲ್ಲಿ ಸುಮಾರು ೯೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡ ನಾಟಕಗಳಲ್ಲಿ ಅತಿ ಹೆಚ್ಚು ಭಾಷೆಗಳಿಗೆ ಅನುವಾದಗೊಂಡು ರಂಗ ಪ್ರಯೋಗ ಕಂಡ ನಾಟಕಗಳು ಗಿರೀಶ್ ಕಾರ್ನಾಡ್‍ರದ್ದೇ ಆಗಿವೆ.

'ಆಡಾಡತ ಆಯುಷ್ಯ' (೨೦೧೧) ಗಿರೀಶ್ ಕಾರ್ನಾಡರ ಆತ್ಮಕಥೆ.

ಸಂಕ್ಷಿಪ್ತ ಪರಿಚಯ

ನಿಜನಾಮ ಗಿರೀಶ್ ರಘುನಾಥ್ ಕಾರ್ನಾಡ್
ಜನನ ೧೯೩೮ ಮೇ ೧೯
ಮರಣ ೨೦೧೯ ಜೂನ್ ೧೦
ತಂದೆ ಡಾ|| ರಘುನಾಥ್ ಕಾರ್ನಾಡ್
ತಾಯಿ ಕೃಷ್ಣಾಬಾಯಿ
ಜನ್ಮ ಸ್ಥಳ ಮ್ಯಾಥೇರಾನ್ (ಮುಂಬಯಿ ಪ್ರಾಂತ, ಈಗಿನ ಮಹಾರಾಷ್ಟ್ರ)
ಪತ್ನಿ ಡಾ|| ಸರಸ್ವತಿ ಗಣಪತಿ

ನಾಟಕ

ಯಯಾತಿ ೧೯೬೧
ತುಘಲಕ್ ೧೯೬೪
ಹಯವದನ ೧೯೭೧
ಅಂಜು ಮಲ್ಲಿಗೆ ೧೯೭೭
ಹಿಟ್ಟಿನ ಹುಂಜ ೧೯೮೦
ನಾಗಮಂಡಲ ೧೯೮೮
ತಲೆದಂಡ ೧೯೯೦
ಅಗ್ನಿ ಮತ್ತು ಮಳೆ ೧೯೯೫
ಮಾನಿಷಾದ (ರೇಡಿಯೋ ನಾಟಕ) ೧೯೯೪
೧೦ ಟಿಪ್ಪು ಸುಲ್ತಾನ ಕಂಡ ಕನಸು ೨೦೦೦
೧೧ ಒಡಕಲು ಬಿಂಬ ಮತ್ತು ಇತರ ನಾಟಕಗಳು ೨೦೦೪
೧೨ ಮದುವೆ ಆಲ್ಬಂ ೨೦೦೬
೧೩ ಪ್ಲವರ್ಸ್ ೨೦೧೨
೧೪ ಬೆಂದ ಕಾಳು ಆನ್ ಟೋಸ್ಟ್ ೨೦೧೨

ಕಾರ್ನಾಡರ ಸಾಹಿತ್ಯಕ್ಕೆ ಸಂದ ಪ್ರಶಸ್ತಿ/ಗೌರವಗಳು

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೧೯೭೨
ಪದ್ಮಶ್ರೀ ೧೯೭೪
ಪದ್ಮಭೂಷಣ ೧೯೯೨
ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ೧೯೯೨
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೯೪
ಭಾರತೀಯ ಜ್ಞಾನಪೀಠ ಪ್ರಶಸ್ತಿ ೧೯೯೮
ಕಾಳಿದಾಸ ಸಮ್ಮಾನ್ ೧೯೯೮
ರಾಜ್ಯೋತ್ಸವ ಪ್ರಶಸ್ತಿ
ಗುಬ್ಬಿ ವೀರಣ್ಣ ಪ್ರಶಸ್ತಿ

ಕಾರ್ನಾಡ್ ನಿರ್ದೇಶಿತ ಚಿತ್ರಗಳು

ವಂಶ ವೃಕ್ಷ ೧೯೭೧
ಡಿ. ಆರ್. ಬೇಂದ್ರೆ (ಸಾಕ್ಷ್ಯ ಚಿತ್ರ) ೧೯೭೨
ತಬ್ಬಲಿಯು ನೀನಾದೆ ಮಗನೆ ೧೯೭೭
ಗೋಧೂಳಿ (ಹಿಂದಿ) ೧೯೭೭
ಒಂದಾನೊಂದು ಕಾಲದಲ್ಲಿ ೧೯೭೮
ಕಾನೂರು ಹೆಗ್ಗಡತಿ ೧೯೯೯
ಕಾಡು ೧೯೭೩
ಉತ್ಸವ ೧೯೮೪
ವೋ ಘರ್(ಹಿಂದಿ) ೧೯೮೪
೧೦ ದ ಲ್ಯಾಂಪ್ ಇನ್ ದ ನಿಟ್ಚೆ (The Lamp in the Nitche) (ಸಾಕ್ಷ್ಯ ಚಿತ್ರ) ೧೯೯೦
೧೧ ಚೆಲುವಿ ೧೯೯೨
೧೨ ಚಿದಂಬರ ರಹಸ್ಯ ೨೦೦೫