ಚಿತ್ರಕೃಪೆ: ವಿಕಿಪೀಡಿಯ
ವಿ. ಸೀ. ಎಂದೇ ಕನ್ನಡ ನವೋದಯ ಸಾಹಿತ್ಯದಲ್ಲಿ ಪ್ರಖ್ಯಾತರಾದ ವಿ. ಸೀತಾರಾಮಯ್ಯನವರು ಕವಿಯಾಗಿ, ವಿಮರ್ಶಕರಾಗಿ ಬಹುಮುಖ ಪ್ರತಿಭೆಯ ಲೇಖಕರು.
ವಿ.ಸೀ.ಯವರು ಧೀಮಂತ ಸಾಹಿತಿಯಷ್ಟೇ ಅಲ್ಲದೆ ನಾಡಿನ ಶ್ರೇಷ್ಠ ಆರ್ಥಿಕ ಚಿಂತಕರೂ ಆಗಿದ್ದರು.
ವಿ.ಸೀ.ಯವರ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಬೆಂಗಳೂರಿನಲ್ಲಿ ಜರುಗಿತು. ನಂತರ ಕಾಲೇಜು ಶಿಕ್ಷಣಕ್ಕಗಿ 1907ರಲ್ಲಿ ಮೈಸೂರಿಗೆ ತೆರಳಿದರು. 1920ರಲ್ಲಿ ಸರ್ ಶೇಷಾದ್ರಿ ಅವರ ಬಂಗಾರದ ಪದಕದೊಂದಿಗೆ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ವಿ. ಸೀತಾರಾಮಯ್ಯ ಅವರು 1920-22ರಲ್ಲಿ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಪಡೆದರು.
ಸ್ವಲ್ಪಕಾಲ ಮಂಬಯಿ ಕರೆನ್ಸಿ ಆಫೀಸಿನಲ್ಲಿ ಉದ್ಯೋಗಿಯಾಗಿದ್ದ ವಿ.ಸೀ.ಯವರು 1928ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ನೇಮಕಗೊಂಡು ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಉಪ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದರು. ೧೯೫೬ರಿಂದ ೧೯೫೮ರ ವರೆಗೆ ಬೆಂಗಳೂರು ಆಕಾಶವಾಣಿ ನಿಲಯದ ಭಾಷಣ ವಿಭಾಗದ ಮುಖ್ಯಸ್ಥರಾಗಿದ್ದರು. 1964ರಿಂದ 1968ರವರೆಗೆ ಹೊನ್ನಾವರದ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು.
ಸಂಕ್ಷಿಪ್ತ ಪರಿಚಯ
ಕಾವ್ಯನಾಮ |
ವಿ.ಸೀ. |
ನಿಜನಾಮ |
ವಿ. ಸೀತಾರಾಮಯ್ಯ |
ಜನನ |
೧೮99 ಜನವರಿ 2 |
ಮರಣ |
೧೯೮3 ಸೆಪ್ಟೆಂಬರ್ 4 |
ತಂದೆ |
ಹುಲ್ಲೂರು ವೆಂಕಟರಾಮಯ್ಯ |
ತಾಯಿ |
ಬೂದಿಗೆರೆ ದೊಡ್ಡ ವೆಂಕಮ್ಮ |
ಜನ್ಮ ಸ್ಥಳ |
ಬೆಂಗಳೂರು ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ |
ಪತ್ನಿ |
ಸರೋಜಮ್ಮ |
ಕವನ ಸಂಕಲನ
೧. |
ಗೀತೆಗಳು |
1931 |
2. |
ದೀಪಗಳು |
1933 |
3. |
ನೆರಳು-ಬೆಳಕು |
1935 |
4. |
ದ್ರಾಕ್ಷಿ-ದಾಳಿಂಬೆ |
1948 |
5. |
ಹೆಜ್ಜೆಪಾಡು |
1959 |
6. |
ಕದಂಬ |
1970 |
7. |
ಅರಳು-ಬರಲು |
1972 |
8. |
ಹಗಲು-ಇರಲು |
1981 |
ಗ್ರಂಥಗಳು
1. |
ಪಂಪ ಯಾತ್ರೆ |
1927 |
2. |
ಸೊಹ್ರಾಬ್ ರುಸ್ತಮ್ |
1930 |
3. |
ಆಗ್ರಹ |
1931 |
4. |
ಹಣ ಪ್ರಪಂಚ |
1937 |
5. |
ಕರ್ನಾಟಕ ಕಾದಂಬರಿ |
1940 |
6. |
ಭಾರತಗಳ ಶ್ರೀ ಕೃಷ್ಣ |
1940 |
7. |
ಅಭಿಜ್ಞಾನ ಶಾಕುಂತಲಾ ನಾಟಕ ವಿಮರ್ಶೆ |
1943 |
8. |
ಅಶ್ವತ್ಥಾಮನ್ |
1946 |
9. |
ಭಾರತದ ರಾಜ್ಯಾಂಗ ರಚನೆ |
1947 |
10. |
ವ್ಯವಹಾರ ಧರ್ಮ |
1949 |
11. |
ಭಾರತದ ಐವರು ಮಾನ್ಯರು |
1951 |
12. |
ಕವಿ ಕಾವ್ಯ ದೃಷ್ಟಿ |
1955 |
13. |
ಶಿವರಾಮ ಕಾರಂತರು |
1956 |
14. |
ಬೆಳದಿಂಗಳು |
1959 |
15. |
ಶ್ರೀ ಶೈಲ ಶಿಖರ |
1960 |
16. |
ಸಾಹಿತ್ಯ ವಿಮರ್ಶೆಗಳಲ್ಲಿ ಅರ್ಥ ಮಾತು ಮೌಲ್ಯ |
1961 |
17. |
ಭಾರತದಲ್ಲಿ ಯೋಜನೆ |
1962 |
18. |
ಸಾಹಿತ್ಯ: ಸಂಪ್ರದಾಯ ಮಾತು ಹೊಸ ಮಾರ್ಗ |
1967 |
19. |
ಸೀಕರಣೆ |
1970 |
20. |
ಛಾಯಾವನ |
1970 |
21. |
ಮಹನೀಯರು |
1970 |
22. |
ಕಾಲೇಜು ದಿನಗಳು |
1971 |
23. |
ಎರಡು ನಾಟಕ: ಛಾಯಾವನ ಮಾತು ಆಗ್ರಹ |
1971 |
24. |
ಸತ್ಯ ಮಾತು ಮೌಲ್ಯ |
1972 |
25. |
ವಾಲ್ಮೀಕಿ ರಾಮಾಯಣ |
1976 |
26. |
ಕಲಾನುಭವ |
1976 |
27. |
ಒಳ್ಳೆಯ ಮನುಷ್ಯ, ಒಳ್ಳೆ ಬದುಕು |
1976 |
28. |
ಮುಂಬೈವಾಸ: ನೆನಪುಗಳು |
1976 |
29. |
ಮಹಾಕವಿ ಪಂಪ |
1976 |
30. |
ಮಹಾಭಾರತ ಕೃಷ್ಣಚರಿತ್ರೆ |
1978 |
31. |
ಪಟ್ಟಬಂಧ |
1979 |
32. |
ಸಾಹಿತ್ಯಲೋಕ |
1979 |
33. |
ಸಾರ್ವಜನಿಕ ಜೀವನದಲ್ಲಿ ಅಧಿಕಾರ, ಶಕ್ತಿ, ಪ್ರಭಾವ ಮಂಡಲಗಳು |
1979 |
34. |
ಹಿರಿಯರು ಗೆಳೆಯರು |
1980 |
35. |
ಸಂವಿಧಾನ ಮಾತು ಕಣ್ಣು |
1992 |
36. |
ಸಾಹಿತ್ಯಲೋಕ (ಭಾಗ II) |
|
ಅನುವಾದ ಗ್ರಂಥಗಳು
1. |
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ |
1959 |
2. |
ಭಾರತ ಸ್ವಾತಂತ್ರ ಗಳಿಸಿತು |
1963 |
3. |
ಪಿಗ್ಮಾಲಿಯನ್ |
1963 |
4. |
ಬಂಗಾಳಿ ಸಾಹಿತ್ಯ ಚರಿತ್ |
1966 |
5. |
ಮೇಜರ್ ಬಾರ್ಬರಾ |
1968 |
6. |
ತ್ಯಾಗರಾಜ |
1969 |
7. |
ಪುರಂದರ ದಾಸ |
1979 |
8. |
ಮೊಬಿ ಡಿಕ್ |
1982 |
9. |
ಪಂಜೆ ಮಂಗೇಶ ರಾವ್ |
1985 |
10. |
ಮಿಷನ್ ವಿತ್ ಮೌಂಟ್‌ಬ್ಯಾಟನ್ |
|
ಸಂಪಾದಿತ ಕೃತಿಗಳು
1. |
ಸ್ನೇಹ ವಿಶ್ವಾಸ |
1990 |
2. |
ನೋವು ನಲಿವು (ಅಪ್ರಕಟಿತ 59 ಕೃತಿಗಳು) |
1990 |
3. |
ಸಮಗ್ರ ಲಲಿತ ಪ್ರಬಂಧ ಸಂಪುಟ |
1992 |
4. |
ಸಮಗ್ರ ನಾಟಕ |
1993 |
5. |
ವ್ಯಕ್ತಿ ಚಿತ್ರ ಸಂಪುಟ” (ಭಾಗ I ಮತ್ತು II) |
1993 |
6. |
ಸ್ಮೃತಿ ಚಿತ್ರ ಸಂಪುಟ |
1997 |
7. |
ವಿಮರ್ಶೆ ಸಂಪುಟ-1 - ಇತಿಹಾಸ ಮತ್ತು ಕಾವ್ಯ |
1998 |
8. |
ವಿಮರ್ಶೆ ಸಂಪುಟ–II – ಕಾವ್ಯ ಮತ್ತು ನಾಟಕ |
1998 |
ಪ್ರಶಸ್ತಿ, ಪುರಸ್ಕಾರ, ಗೌರವ, ಅಧ್ಯಕ್ಷತೆ
೧೯73 |
ಅರಲು-ಬರಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ |
|
ಕಾರವಾರದಲ್ಲಿ ನಡೆದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾವ್ಯ ವಿಭಾಗದ ಅಧ್ಯಕ್ಷತೆವಹಿಸಿದ್ದರು. |
|
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಮಿತಿ ಮತ್ತು ಜ್ಞಾನಪೀಠ ಪ್ರಶಸ್ತಿ ಸಮಿತಿಗಳ ಸದಸ್ಯರಾಗಿದ್ದರು. |
|
ಗದಗದಲ್ಲಿ ನಡೆದ ಮುಂಬೈ ಪ್ರಾಂತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. |
|
ಅಭಿನವ ಗ್ರಂಥ 'ಮಹನೀಯರು' ಮತ್ತು ವಿವರಣಾತ್ಮಕ ಪ್ರಬಂಧ 'ಕೃಷ್ಣಚರಿತ್ರಾ' ಗೆ ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. |
1976 |
ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ. |
|
ಜೀವಮಾನದ ಸಾಧನೆಗಾಗಿ 'ರೂಪಾರಾಧಕ', 'ವಿ.ಸೀ' ಮತ್ತು 'ವಿ.ಸೀ.-75' ಅಭಿನಂದನಾ ಗ್ರಂಥಗಳನ್ನು ಸಮರ್ಪಿಸಲಾಗಿದೆ. |