ತ.ರಾ.ಸು.

TaRaSu

ತ.ರಾ.ಸು. ಎಂದೇ ಪ್ರಸಿದ್ಧರಾಗಿರುವ ತರೀಕೆರೆ ರಾಮಸ್ವಾಮಿ ಸುಬ್ಬರಾಯರು, ಕಾದಂಬರಿ ಕ್ಷೇತ್ರದಲ್ಲಿ ಮಹತ್ತರವಾದ ಹೆಸರು ಗಳಿಸಿರುವ ಪ್ರತಿಭಾನ್ವಿತ ವ್ಯಕ್ತಿ.

ತ.ರಾ.ಸು. ರವರು ಮೊದಲಲ್ಲಿ ಕನ್ನಡದ ಹೆಸರಾಂತ ಪ್ರಗತಿಶೀಲ ಸಾಹಿತಿಗಳಾದ ಎ. ಎನ್. ಕೃಷ್ಣ ರಾವ್ ರವರ ಪ್ರಭಾವಕ್ಕೊಳಗಾದರು. 'ಪುರುಷಾವತಾರ' ಮತ್ತು ಮುಂಜಾವಿನಿಂದ ಮುಂಜಾವು' ಮೊದಲಲ್ಲಿ ಬರೆದ ಕೆಲವು ಪ್ರಗತಿಶೀಲ ಕಾದಂಬರಿಗಳು.

ಇವರ ಮಹೋನ್ನತ ಕಾದಂಬರಿಗಳಾದ 'ಚಂದವಳ್ಳಿಯ ತೋಟ', 'ಹಂಸ ಗೀತೆ', 'ಬಿಡುಗಡೆಯ ಬೇಡಿ', 'ನಾಗರ ಹಾವು' ಒಳ್ಳೆಯ ಚಲನಚಿತ್ರಗಳಾಗಿ ಅಪಾರ ಜನಮನ್ನಣೆ ಗಳಿಸಿವೆ.

ರಕ್ತರಾತ್ರಿ, ಕಂಬನಿಯ ಕುಯಿಲು, ತಿರುಗು ಬಾಣ, ರಾಜ್ಯ ದಾಹ ಇವರ ಜನಪ್ರಿಯ ಚಾರಿತ್ರಿಕ ಕಾದಂಬರಿಗಳು. ತ.ರಾ.ಸು. ಅವರ ವಿಶಿಷ್ಟ ಗದ್ಯ ಶೈಲಿ ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಪ್ರಸಿದ್ಧವಾಗಿದೆ.

ತ.ರಾ.ಸು. ರವರು ಇಣ್ಣು ಅನೇಕ ಕಾಡಂಬರಿಗಳನ್ನು ಬರೆಯಲು ಮತ್ತು ಪೂರೈಸಲು ಸಿದ್ಧತೆಗಳನ್ನು ಮಾಡಿದ್ದರು. ಆದರೆ ಅವು ಪೂರ್ಣಗೊಳ್ಳಲಿಲ್ಲ. ತ.ರಾ.ಸು. ಅವರ ಆತ್ಮಕಥೆ 'ಹಿಂತಿರುಗಿ ನೋಡಿದಾಗ', ಇದಕ್ಕೆ ಹೊರತಾಗಿಲ್ಲ. ಇದನ್ನು ಅವರ ಮರಣಾನಂತರದಲ್ಲಿ ಅವರ ಪತ್ನಿ ಪೂರ್ಣಗೊಳಿಸಿ ೧೯೯೦ ರಲ್ಲಿ ಬಿಡುಗಡೆ ಮಾಡಿದ್ದಾರೆ.

ತ.ರಾ.ಸು. ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು.

ಸಂಕ್ಷಿಪ್ತ ಪರಿಚಯ

ಸಾಹಿತ್ಯ ನಾಮ ತ.ರಾ.ಸು.
ನಿಜನಾಮ ತರೀಕೆರೆ ರಾಮಸ್ವಾಮಿ ಸುಬ್ಬರಾಯ
ಜನನ ೧೯೨೦ ಏಪ್ರಿಲ್ ೨೧
ಮರಣ ೧೯೮೪ ಏಪ್ರಿಲ್ ೧೦
ತಂದೆ ರಾಮಸ್ವಾಮಿ
ತಾಯಿ ಸೀತಮ್ಮ
ಪತ್ನಿ ಅಂಬುಜಾ
ಜನ್ಮ ಸ್ಥಳ ಮಲೆ ಬೆನ್ನೂರು

ಕಾದಂಬರಿಗಳು

ಮನೆಗೆ ಬಂದ ಮಹಾಲಕ್ಷ್ಮಿ ೧೯೪೪
ಚಂದವಳ್ಳಿಯ ತೋಟ
ಹಂಸ ಗೀತೆ
ಬಿಡುಗಡೆಯ ಬೇಡಿ
ನಾಗರ ಹಾವು
ರಕ್ತರಾತ್ರಿ
ಕಂಬನಿಯ ಕುಯಿಲು
ತಿರುಗು ಬಾಣ
ರಾಜ್ಯ ದಾಹ
೧೦ ಸಾಕು ಮಗಳು
೧೧ ಗಾಳಿ ಮಾತು
೧೨ ಬೆಂಕಿಯ ಬಲೆ
೧೩ ಬೆಳಕು ತಂದ ಬಾಲಕ
೧೪ ಒಮ್ಮೆ ನಕ್ಕ ನಗು
೧೫ ಆಕಸ್ಮಿಕ
೧೬ ಶಿಲ್ಪ ಶಿಲೆ
೧೭ ಚದುರಂಗದ ಮನೆ
೧೮ ಎರಡು ಹೆಣ್ಣು ಒಂದು ಗಂಡು
೧೯ ಕಾರ್ಕೋಟಕ
೨೦ ಸಿಡಿಲ ಮೊಗ್ಗು
೨೧ ಶಿಶು ದೈತ್ಯ
೨೨ ಚಂದನದ ಗೊಂಬೆ
೨೩ ಡಾಕ್ಟರ್ ಕೋಟ್ನೀಸ್
೨೪ ಪಂಜರದ ಪಕ್ಷಿ
೨೫ ಹಾವು ಹಿಡಿದವರು

ಜೀವನ ಚರಿತ್ರೆ

ಅ.ನ.ಕೃ.
ರೇಖಾ ಚಿತ್ರಗಳು

ಆನುವಾದಿತ ಕೃತಿ

ಗಾಂಧಿಜೀ
ದಳಪತಿ
ಡಾ|| ಕೋಟ್ನಸ್

ನಾಟಕ

ಮೃತ್ಯು ಸಿಂಹಾಸನ ೧೯೫೫
ಜ್ವಾಲಾ ೧೯೫೫
ಅನ್ನಾವತಾರ (ರೇಡಿಯೋ ನಾಟಕಗಳು) ೧೯೫೪
ಮಾಹಾಶ್ವೇತೆ
ಬಾಳು ಬೆಳಗಿತು
ರುದ್ರಾಧ್ಯಾಯ

ಪ್ರಶಸ್ತಿ, ಗೌರವ

೧೯೭೦ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ತ.ರಾ.ಸು. ಅವರಿಗೆ 'ಶ್ರೇಷ್ಠ ಕಾದಂಬರಿಕಾರ ಪ್ರಶಸ್ತಿ' ನೀಡಿ ಸನ್ಮಾನಿಸಿತು.
೧೯೭೮ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೮೫ 'ದುರ್ಗಾಸ್ತಮಾನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.