ವಿಭಾಗ: ವ್ಯಾಕರಣ
ಈ ವಿಭಾಗದಲ್ಲಿರುವ 8+ ಜ್ಞಾನ ಪುಟಗಳು
ಅವ್ಯಯಗಳು
ಕನ್ನಡ ವ್ಯಾಕರಣದಲ್ಲಿ "ಅವ್ಯಯಗಳು" ಒಂದು ಪ್ರಮುಖ ಭಾಗವಾಗಿದೆ. ಭಾಷೆಯಲ್ಲಿ ಪದಗಳು ತಮ್ಮ ಲಿಂಗ, ವಚನ, ಮತ್ತು ವಿಭಕ್ತಿಗಳಿಗೆ ಅನುಗುಣವಾಗಿ ರೂಪಾಂತರಗೊಳ್ಳುತ್ತವೆ. ಆದರೆ, ಕೆಲವು ಪದಗಳು ಯಾವುದೇ ಬದಲಾವಣೆಯಿಲ್ಲದೆ ವಾಕ್ಯದಲ್ಲಿ ಒಂದೇ ರೂಪದಲ್ಲಿ ಬಳಕೆಯಾಗುತ್ತವೆ. ಇಂತಹ ಪದಗಳೇ 'ಅವ್ಯಯಗಳು'. ಇವುಗಳನ್ನು 'ಅವಿಕಾರಿ ಪದಗಳು' ಎಂದೂ ಕರೆಯುತ್ತಾರೆ.

ಅಲಂಕಾರಗಳು: ಅರ್ಥಾಲಂಕಾರ
ಕಾವ್ಯಗಳಲ್ಲಿ ಕವಿಗಳು ಶಬ್ದಗಳ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದ್ದರೆ ಅಂತಹವನ್ನು 'ಶಬ್ದಾಲಂಕಾರ'ಗಳೆನ್ನುವರು. ಅಲಂಕಾರಿಕ ಮಾತುಗಳು ಅರ್ಥ ಚಮತ್ಕಾರಗಳನ್ನು ಒಳಗೊಂಡಿದ್ದರೆ, ಅವುಗಳಿಗೆ 'ಅರ್ಥಾಲಂಕಾರ'ಗಳೆನ್ನುವರು. ಪದಗಳ, ಅರ್ಥಗಳ ಚಮತ್ಕಾರಗಳಿಂದ ಕಾವ್ಯ ಅಥವಾ ಮಾತಿನ ಸೌಂದರ್ಯವನ್ನು ಹೆಚ್ಚಿಸುವುದನ್ನು ಅರ್ಥಾಲಂಕಾರವೆನ್ನುವರು. ಸಂಸ್ಕೃತದಲ್ಲಿ ವಿದ್ವಾಂಸರು ಸುಮಾರು 120 ಅರ್ಥಾಲಂಕಾರಗಳನ್ನು ಹೆಸರಿಸುತ್ತಾರೆ, ಅರ್ಥಾಲಂಕಾರಗಳಲ್ಲಿ ಉಪಮೇಯ, ಉಪಮಾನಗಳೊಂದಿಗಿನ ಸಂಬಂಧದಿಂದ ಅಲಂಕಾರ ಯಾವುದು ಎಂದು ನಿರ್ಧರಿಸಬಹುದು.

ಲೇಖನ ಚಿಹ್ನೆಗಳು
ಬರವಣಿಗೆಯ ಮೂಲಕ ಪ್ರಕಟವಾಗುವ ಆಲೋಚನೆ ಅಭಿಪ್ರಾಯಗಳಲ್ಲಿ ಅರ್ಥೈಸಲು ವಾಕ್ಯ ಮತ್ತು ವಾಕ್ಯ ಭಾಗಗಳ ಉಚಿತವಾದ ಎಡೆಗಳಲ್ಲಿ ಕಲ್ಪಿಸುವ ವಿರಾಮಸ್ಥಾನಗಳ ಲಿಖಿತಸಂಕೇತಗಳೇ ಲೇಖನ ಚಿಹ್ನೆಗಳು. ಲೇಖನ ಚಿಹ್ನೆಗಳಿಲ್ಲದಿದ್ದಲ್ಲಿ ವಾಕ್ಯಗಳ ಅರ್ಥ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಬರೆಯುವಾಗ ಸರಿಯಾದ ಚಿಹ್ನೆಗಳನ್ನು ಬಳಸುವುದರಿಂದ, ಓದುಗನು ಬರವಣಿಗೆಯ ಸರಿಯಾದ ಅರ್ಥವನ್ನು ಗ್ರಹಿಸಬಹುದಲ್ಲದೆ, ಸರಿಯಾದ ರೀತಿಯಲ್ಲಿ ವಾಚನವನ್ನು ಮಾಡಬಹುದು.

ಅಲಂಕಾರಗಳು: ಶಬ್ದಾಲಂಕಾರ
ಮನುಷ್ಯ ಉಡುಗೆ ತೊಡುಗೆಗಳಿಂದ ಹೇಗೆ ತನ್ನ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾನೆಯೋ, ಹಾಗೇಯೇ ಮಾತನಾಡುವಾಗ ಕೇಳುಗರನ್ನು ಆಕರ್ಷಿಸಲು, ಹರ್ಷಿಸಲು, ವಿಷಯವನ್ನು ಮನದಟ್ಟು ಮಾಡಲು ಶಬ್ದಗಳನ್ನು ಕಿವಿಗೆ ಇಂಪಾಗುವಂತೆ, ಅರ್ಥ ಹೆಚ್ಚಿಸುವಂತೆ ಚಮತ್ಕಾರಿಕ ರೀತಿಯಲ್ಲಿ ಬಳಸುವುದು ರೂಡಿ. ಇದಕ್ಕೆ ಭಾಷೆಯ ಅಲಂಕಾರಗಳೆನ್ನುತ್ತಾರೆ. ಅಲಂಕಾರಗಳು ಕಾವ್ಯದ, ಗದ್ಯದ ಸೊಬಗನ್ನು ಹೆಚ್ಚಿಸುವುದಲ್ಲದೆ, ಕೇಳುಗರ ಗಮನವನ್ನು ಸೆಳೆಯುವಂತೆ ಮಾಡುತ್ತದೆ. ಕಾವ್ಯಗಳಲ್ಲಿ ಕವಿಗಳು ಶಬ್ದಗಳ ಜೋಡಣೆಯ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದ್ದರೆ ಅಂತಹವನ್ನು 'ಶಬ್ದಾಲಂಕಾರ'ಗಳೆನ್ನುವರು.

ದೇಶ್ಯ - ಅನ್ಯದೇಶ್ಯ ಶಬ್ದಗಳು
ಕನ್ನಡದಲ್ಲಿಯೂ ಬೇರೆ ಭಾಷೆಗಳಿಂದ ಅನೇಕ ಶಬ್ದಗಳು ಬಂದು ಸೇರಿವೆ, ಸೇರುತ್ತಲಿವೆ. ಹಾಗೆಯೇ ಕನ್ನಡದ ಅನೇಕ ಶಬ್ದಗಳು ಬೇರೆ ಭಾಷೆಯಲ್ಲಿ ಸೇರಿವೆ. ಅಚ್ಚಗನ್ನಡ ಶಬ್ದಗಳನ್ನು 'ದೇಶ್ಯ' ಶಬ್ದಗಳೆನ್ನುತ್ತೇವೆ. ಉಳಿದವುಗಳನ್ನು 'ಅನ್ಯದೇಶ್ಯ' ಶಬ್ದಗಳೆನ್ನುತ್ತೇವೆ.
ಕನ್ನಡ ಸಮಾಸಗಳು
ಎರಡು ಅಥವಾ ಅನೇಕ ಪದಗಳು ಸೇರಿ ಒಂದು ಪದವಾಗುವಾಗ ಮಧ್ಯದಲ್ಲಿ ವಿಭಕ್ತಿ ಪ್ರತ್ಯಯ ಲೋಪವಾದಾಗ 'ಸಮಾಸ' ವೆನಿಸುವುದು. ಸಮಾಸದಲ್ಲಿ ಒಂಬತ್ತು ವಿಧಗಳಿವೆ
ಸಂಸ್ಕೃತ ಸಂಧಿಗಳು
ಕನ್ನಡ ಭಾಷೆಗೆ ಸಾವಿರಾರು ವರ್ಷಗಳಿಂದ ಸಂಸ್ರೃತದ ಅನೇಕ ಶಬ್ದಗಳು ಬಂದು ಸೇರಿವೆ. ಈ ರೀತಿಯಲ್ಲಿ ಬಂದು ಸೇರಿದ ಸಂಸ್ರೃತ ಶಬ್ದಗಳು ಕಾಲ ವಿಳಂಬವಿಲ್ಲದೆ ಕೂಡಿದಾಗ ಸಂಧಿ ಏರ್ಪಡುತ್ತದೆ. ಸಂಸ್ಕೃತದಲ್ಲಿ ಸ್ವರಕ್ಕೆ ಸ್ವರ ಪರವಾದರೆ ಸ್ವರಸಂಧಿಗಳೂ, ವ್ಯಂಜನಕ್ಕೆ ವ್ಯಂಜನ ಪರವಾದರೆ ವ್ಯಂಜನ ಸಂಧಿಗಳೆಂದು ಹೆಸರು. ಸ್ವರಸಂಧಿಗಳಲ್ಲಿ ಮುಖ್ಯವಾದವುಗಳು, ಸವರ್ಣಧೀರ್ಘ ಸಂಧಿ, ಗುಣ ಸಂಧಿ, ವೃದ್ಧಿ ಸಂಧಿ, ಯಣ್ ಸಂಧಿ. ಸಂಸ್ಕೃತ ವ್ಯಂಜನ ಸಂಧಿಗಳಲ್ಲಿ ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿ ಇರುವುದು ಜತ್ವ ಸಂಧಿ, ಶ್ಚುತ್ವ ಸಂಧಿ, ಅನುನಾಸಿಕ ಸಂಧಿ.
ಕನ್ನಡ ಸಂಧಿಗಳು
ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಕೂಡುವುದಕ್ಕೆ ಸಂಧಿ ಎಂದು ಹೆಸರು. ಕನ್ನಡ ಸಂಧಿಯಲ್ಲಿ ಲೋಪ, ಆಗಮ, ಆದೇಶ ಎಂದು ಮೂರು ವಿಧಗಳುಂಟು.