ಹಾಡು ಹಳೆಯದಾದರೇನು

ಭಾವ ನವನವೀನ

ಎದೆಯ ಭಾವ ಹೊಮ್ಮುವುದಕೆ

ಭಾಷೆ ಒಂದು ಸಾಧನ

ಹಳೆಯ ಹಾಡ ಹಾಡು ಮತ್ತೆ

ಅದನೆ ಕೇಳಿ ತಣಿಯುವೆ

ಹಳೆಯ ಹಾಡಿನಿಂದ ಹೊಸತು

ಜೀವನವನೆ ಕಟ್ಟುವೆ

ಹಾಡನೊಲಿದು ಕೇಳುವನಿತು

ತೆರೆದ ಹೃದಯ ನನಗಿದೆ

ಅಷ್ಟೆ ಸಾಕು; ಹಾಡು ನೀನು

ಅದನೆ ಕೇಳಿ ಸುಖಿಸುವೆ

ಹಮ್ಮು ಬಿಮ್ಮು ಒಂದು ಇಲ್ಲ

ಹಾಡು, ಹೃದಯ ತೆರೆದಿದೆ

ಹಾಡಿನಲ್ಲಿ ಕರಗಿ ಬಿಡಲು

ನನ್ನ ಮನವು ಕಾದಿದೆ

ಕವಿತೆ

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail