ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ,

ನಿನ್ನೊಳಿದೆ ನನ್ನ ಮನಸು

ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ

ನಿನ್ನೊಲುಮೆ, ನನ್ನ ಕಂಡು

ಸಾಗರನ ಹೃದಯದಲಿ ರತ್ನಪರ್ವತ ಮಾಲೆ

ಮಿಂಚಿನಲಿ ಮೀವುದಂತೆ

ತೀರದಲಿ ಬಳುಕುವಲೆ ಕಣ್ಣ ಚುಂಬಿಸಿ ಮತ್ತೆ

ಸಾಗುವುದು ಕನಸಿನಂತೆ

ಅಲೆ ಬಂದು ಕರೆಯುವುದು ನಿನ್ನೊಲುಮೆಯರಮನೆಗೆ

ಒಳಗಡಲ ರತ್ನಪುರಿಗೆ

ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ-

ಯೊಳಗುಡಿಯ ಮೂರ್ತಿಮಹಿಮೆ

ನಿನ್ನ ಪ್ರೇಮದ ಪರಿಯ ನಾನ್ರಿಯೆ, ಕನಕಾಂಗಿ

ತಾರೆಯಾಗದೆ ಕಾಣುವೀ ಮಿಂಚು, ನಾಳೆ, ಅರ್ಧಾಂಗಿ?

ಪ್ರೀತಿಭಾವಗೀತೆ

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail