ಮಿಂಚಾಗಿ ನೀನು ಬರಲು

ಸೋನು ನಿಗಮ್ ಜಯಂತ್ ಕಾಯ್ಕಿಣಿ ವಿ. ಹರಿಕೃಷ್ಣ

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ

ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ

ವಿರಹದ ಬೇಗೆ ಸುಡಲು ಎದೆಯಲಿ ಬೆಸಿಗೆಕಾಲ

ಇನ್ನೆಲ್ಲಿ ನನಗೆ ಉಳಿಗಾಲ? || ಪ ||

ನಾ ನಿನ್ನ ಕನಸಿಗೆ ಚಂದಾದಾರನು

ಚಂದಾ ಬಾಕಿ ನೀಡಲು ಬಂದೆ ಬರುವೆನು

ನಾ ನೇರ ಹೃದಯದ ವರದಿಗಾರನು

ನಿನ್ನ ಕಂಡ ಕ್ಷಣದಲೇ ಮಾತೆ ಮರೆವೆನು

ಕ್ಷಮಿಸು ನೀ ಕಿನ್ನರಿ ನುಡಿಸಲೆ ನಿನ್ನನು

ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು

ನಿನ್ನ ಮನದ ಕವಿತೆ ಸಾಲ ಪದೆವನಾನು ಸಾಲಗಾರನು

ಕಣ್ಣ ತೆರೆದು ದೋಚಿಕೊಂಡ ನೆನಪುಗಳಿಗೆ ಪಾಲುದಾರ

ನನ್ನದೀ ವೇದನೆ ನಿನಗೆ ನಾ ನೀಡೆನು

ಹೇಳಿ ಕೇಳಿ ಮೊದಲೇ ಚೂರು ಕಳ್ಳ ನಾನು