ಇದೇ ನಾಡು ಇದೇ ಭಾಷೆ

ಎಸ್. ಪಿ. ಬಾಲಸುಬ್ರಮಣ್ಯಂ
ಪಿ. ವಿ. ಕೊಟೇಶ್ವರರಾವ್
ಸತ್ಯಂ

ಲಾ ಲಲ್ಲ ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲಾ..ಲಾ..ಲಾ

ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ

ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ|| ಪ ||

ಲಾ..ಲಾ..ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲ..ಲ..ಲ..ಲಾ

ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು

ಲಾ..ಲಾ..ಲಲ..ಲಾಲ

ಕಲ್ಲಲಿ ಕಲೆಯನು ಕಂಡ, ಬೇಲೂರು ಶಿಲ್ಪದ ಬೀಡು

ಬಸವೇಶ್ವರ, ರನ್ನ-ಪಂಪರ ಸವಿ ವಾಣಿಯ ನಾಡು|| ೧ ||

ಲಲಾಲ..ಲಲಾಲ..ಲಲಾಲ..ಲಲಾ..ಲಲಾ

ಚಾಮುಂಡಿ ರಕ್ಷೆಯು ನಮಗೆ ಗೊಮಟೇಶ ಕಾವಲು ಇಲ್ಲಿ

ಶ್ರಿಂಗೇರಿ ಶಾರದೆ ವೀಣೆ, ರಸ ತುಂಗೆ ಆಗಿದೆ ಇಲ್ಲಿ

ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು|| ೨ ||

ಲಾ..ಲಾ..ಲಾ ಲಲ್ಲಲಾ ಲಲ್ಲಲ್ ಲಲ್ಲಲ್ ಲ..ಲ..ಲ..ಲಾ

ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ

ಲಾ..ಲಾ..ಲಲ..ಲಾಲ

ಎನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿಯುವೆ

ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ || ೩ ||

ನೀವು ಕೂಡ ಕನ್ನಡದಲ್ಲಿ ಬ್ಲಾಗ್‌ ಮತ್ತು ಕಥೆಗಳನ್ನು ಬರೆಯಲು ಬಯಸುತ್ತೀರಾ?
ಇಲ್ಲಿ ಪ್ರಾರಂಭಿಸಿ

ಪರಿಕರಗಳು

ಸಾಲದ ಮಾಸಿಕ ಕಂತು (EMI)

ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.

ಹೆಸರು ಹುಡುಕಿ

ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.

ಕರ್ನಾಟಕ ರಾಜ್ಯ

ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!

ದೈನಂದಿನ ಪಂಚಾಂಗ

ನಿಖರವಾದ ದೈನಂದಿನ ಪಂಚಾಂಗ ವಿವರಗಳನ್ನು ಅನ್ವೇಷಿಸಿ. ತಿಥಿ, ನಕ್ಷತ್ರ, ಯೋಗ, ಕರಣ, ಮತ್ತು ಶುಭ/ಅಶುಭ ಸಮಯಗಳ ನಿಖರವಾದ ಮಾಹಿತಿಯನ್ನು ಪಡೆಯಿರಿ.