ಏ ಮಳೆ ಹನಿಯೇ

ಅರ್ಜುನ್ ಜನ್ಯ ಆರ್ಜುನ್ ಜನ್ಯ

ಏ ಮಳೆ ಹನಿಯೇ

ನೀ ಭೂಮಿಗೆ ಬರುವ ಮುನ್ನ

ನನ್ನ ಕಣ್ಣಲ್ಲಿ ಇರುವ ನೋವು

ನೀನು ನೋಡು|| ಪ ||

ನೀ ಆಕಾಶದಿಂದ

ಈ ಭೂಮಿಗೆ ಸೇರುವೆ

ನನ್ನ ಕಣ್ಣೀರಿಗೆ ಇಲ್ಲಿ

ತುಟಿಯೆ ಮಡಿಲುವೇನೆ|| ಅನು ||

ಎಲ್ಲಿ ಹೋದರು ಕೂಡ

ನಿನ್ನ ಮರೆಯಲು ಸಾಧ್ಯವೆ

ಮನದ ಹೊಸ್ತಿಲಲಿ ಈಗ

ನಿನ್ನ ಹೆಜ್ಜೆಯೇ ಮೂಡಿದೆ

ಅಳಿಸಲು ಹೋದರೆ ಒಲವಿನ

ತಾವರೆ ತಡೆ ಹಾಕಿದೆ

ಅರಿಯದ ನೋವಿಗೆ ಮನಸು

ಯಾಕೋ ರುಜು ಹಾಕಿದೆ|| 1 ||

ನನ್ನ ಕಣ್ಣಂಚಲಿ

ಅಲೆಯೊಂದು ಜಾರಿದೆ

ಅದರ ಒಳಗೆ ನಿನ್ನದೆ

ನೆನಪೊಂದು ಬೆಸೆದಿದೆ

ಉಸಿರಿನ ಶಾಖಕೆ ಕನಸಿನ

ಮುಗಿಲು ಕರಗಿ ಹೋಗಿದೆ

ಸುಳಿವೆಯೆ ಇಲ್ಲದ ಪ್ರೀತಿಗೆ

ಯಾಕೋ ಹೃದಯ ಹುಡುಕಿದೆ|| ೨ ||