ಹೃದಯವೆ ಬಯಸಿದೆ ನಿನ್ನನೇ
ಕೃಷ್ಣನ್ ಲವ್ ಸ್ಟೋರಿ ಜಯಂತ್ ಕಾಯ್ಕಿಣಿ
ವಿ. ಶ್ರೀಧರ್
ಸಂತೆಯಲ್ಲೆ ನಿಂತರೂನು...
ಸಂತೆಯಲ್ಲೆ ನಿಂತರೂನು ನೋಡು ನೀನು ನನ್ನನ್ನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೆ
ಕಣ್ಣ ಕಟ್ಟಿ ಬಿಟ್ಟರೂನು ಈಗ ನಾನು ಕಾಣಬಲ್ಲೆ ನಿನ್ನನ್ನೆ
ಸೇರಬಲ್ಲೆ ನಿನ್ನನ್ನೆ ನಾನು ಮಾತ್ರ ಬಲ್ಲೆ ನಿನ್ನನ್ನೆ
ಹೃದಯವೆ ಬಯಸಿದೆ ನಿನ್ನನೇ
ತೆರೆಯುತ ಕನಸಿನ ಕಣ್ಣನೇ
ದಿನವಿಡಿ ನಿನ್ನಯ ನೆನಪನೆ ನೇಯುವೆ
ಸೆಳೆತಕೆ ಸೋಲುತ, ನಾ ಸನಿಹಕೆ ಕಾಯುವೆ || ಪ ||
ಜೀವಗಳ ಭಾಷೆಯಿದು ಬೇಕೆ ಅನುವಾದ
ಭಾವಗಳ ದೋಚುವುದು ಚಂದ ಅಪರಾಧ
ಯಾರಿಗೂ ಹೇಳದ ಮಾಹಿತಿ ನೀಡು
ಖಾತರಿ ಇದ್ದರೂ ಕಾಯಿಸಿ ನೋಡು
ನಿನ್ನಿಂದ ನನ್ನ ನೀನೇ ಕಾಪಾಡು || ೧ ||
|| ಸಂತೆಯಲ್ಲೆ ನಿಂತರೂನು ||
ಕಣ್ಣಿನಲ್ಲೆ ದಾರಿಯಿದೆ ನನ್ನ ಸಲುವಾಗಿ
ಮೆಲ್ಲಗೆ ನೀ ಕೈಯ ಹಿಡಿ ಇನ್ನು ಬಲವಾಗಿ
ನನ್ನಯ ತೋಳಲಿ ನೀನಿರೆ ಇಂದು
ಸಾವಿಗು ಹೇಳುವೆ ನಾಳೆ ಬಾ ಎಂದು
ಆಗಲೆ ಬೇಡ ದೂರ ಎಂದೆಂದು || ೨ ||
ಕೃಷ್ಣನ್ ಲವ್ ಸ್ಟೋರಿ
ಚಿತ್ರ ನೋಡಿ