ಶ್ರೀಕಂಠ ವಿಷಕಂಠ
ಅನುರಾಗ ಅರಳಿತು ಡಾ|| ರಾಜ್ ಕುಮಾರ್
ಚಿ. ಉದಯಶಂಕರ್
ಉಪೇಂದ್ರ ಕುಮಾರ್
ಶ್ರೀಕಂಠ ವಿಷಕಂಠ ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಗತಿ ನೀನೆಂದರೆ ಒಡುತ ಬರುವ ಕರುಣಾ ಸಾಗರನೇ|| ಪ ||
ಹರಿಯುವ ನದಿಯಲಿ ಕಲರವ ನಾದ ಕೂಡ ಶಿವಶಿವ ಎನ್ನುತಿದೆ
ಅರಳಿದ ಸುಮದಲಿ ನಲಿಯುವ ಭ್ರಮರವು ಶಿವನಾಮ ಹಾಡುತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ ನಿನ್ನನೆ ಸ್ಮರಿಸುತಿದೆ|| 1 ||
>ಸಾವಿ ಜನುಮವೆ ಬಂದರು ಹೀಗೆ ನಿನ್ನ ಸನ್ನಿದಿಯಲಿ ಇರಿಸು
ಉಸಿರಿನ ಉಸಿರಲಿ ತಂದೆ ಎಂದು ನಿನ ನಾಮವನು ಬೆರೆಸು
ಕತ್ತಲಲಿರುವೆ ನೆಮ್ಮದಿ ತುಂಬಿ ಕೈ ಹಿಡಿದು ನಡೆಸು|| 2 ||
ಅನುರಾಗ ಅರಳಿತು
ಚಿತ್ರ ನೋಡಿ