ಶಿವಪ್ಪ ಕಾಯೊ ತಂದೆ
ಬೇಡರ ಕಣ್ಣಪ್ಪ ಎಸ್.ಎನ್. ನಂಜಪ್ಪ(ನಂಜುಕವಿ)
ಶರಣು ಶಂಕರ ಶಂಭೋ ಓಂಕಾರ ನಾದರೂಪ
ಮೊರೆಯನಿ ಆಲಿಸಿ ಪಾಲಿಸು ಸರ್ವೇಶಾ
ಶಿವಪ್ಪ ಕಾಯೊ ತಂದೆ ಮೂರು ಲೋಕ ಸ್ವಾಮಿ ದೇವಾ
ಹಸಿವೆಯನ್ನು ತಾಳಲಾರೆ ಕಾಪಾಡಯ್ಯಾ, ಹರನೇ || ಪ ||
ಭಕ್ತಿಯಂತೆ ಪೂಜೆಯಂತೆ ಒಂದು ಅರಿಯೆ ನಾ
ಪಾಪವಂತೆ ಪುಣ್ಯವಂತೆ ಕಾಣೆನಯ್ಯ ನಾ
ಶುದ್ಧನಾಗಿ ಪೂಜೆಗೈಯ್ಯೆ ಒಲಿವೆಯಂತೆ ನೀ
ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ
ನಾದವಂತೆ ವೇದವಂತೆ ಒಂದು ತಿಳಿಯೆ ನಾ
ಬೆಂದ ಜೀವ ನೊಂದ ಪೂಜೆ ಬಂದು ನೋಡೆಯಾ, ಹರನೇ|| ೧ ||
ಏಕಚಿತ್ತದಿ ನಂಬಿದವರ ನೀ ಸಾಕಿ ಸಲಹುವೆಯಂತಪ್ಪಾ
ಶೋಕವ ಹರಿಸುವ ದೇವ ನೀನಾದರೆ
ಬೇಟೆಯ ತೋರೋ ಎನ್ನಪ್ಪಾ
ಲೋಕವನಾಳುವ ನೀನಪ್ಪ
ಬೇಟೆಯ ತೋರೋ ಎನ್ನಪ್ಪಾ || ೨ ||
ಬೇಡರ ಕಣ್ಣಪ್ಪ
ಚಿತ್ರ ನೋಡಿ