ಮಳೆ ಮರೆತು
ಉಳಿದವರು ಕಂಡಂತೆಮಳೆ ಮರೆತು ತಾನಾಗಿ ಹಸಿರಾಗಿ ನಿಂತಾಗ ಈ ಭೂಮಿ
ಸಲಹೇನೆ ಕೊಡಬೇಡ ದೇವರೆ ನೀನಿಂಗೆ ಹಂಗಾಮಿ
ತಣ್ಣೀರೆ ನಿನ್ನ ಸಂತೇಗೆ ಕರೆದಾಗ ಬೇಜಾರಿನಲ್ಲಿ ಸಜ್ಜಾದೆ ನಾ
ನೋವಿರುವ ಗಾಯ ಬೆರಳಲ್ಲೆ ಇರುವಾಗ
ಬಿಡಿಸೋದ ಕಲಿತೆ ರಂಗೋಲಿಯ
ಮಿಂಚೊಂದು ಕಿಡಿಕಾರಿ ಆಕಾಶ ಚೆಲುವಾಯ್ತು ಹೇಗೇ..
ಬೆಂಕಿಯ ಕಡಿಗೀರಿ ಮನೆಯೆಲ್ಲ ಬೆಳಕಾದ ಹಾಗೆ
ಆ ಚಂದ್ರನಿಂದು ನಿದ್ದೇಲೆ ಎದ್ದು ಕಣ್ಣುಜ್ಜಿಕೊಂಡು ತೇಲಿ ಬಂದ
ತೆಂಗಿನ ಗರಿಗೆ ತಾಕುತ್ತ ಹೋದ ಊರೂರಿಗೆಲ್ಲ ಚಂದ್ರ ತಂದ
ದೂರೀಲಿ ಹುಟ್ಟಿಂದು ಕೈ ತಪ್ಪಲು
ತಕ್ಷಣವೆ ನೆರವಾಯ್ತು ನಡು ನೀರ ಕಡ ನೀಡಿ
ಹಾಗೊಂದು ಹೊರಟಾಗ ಕಡುಗತ್ತಲು
ರಕ್ಷಣೆಗೆ ಬಂದಂತೆ ಬೆಳಕೊಂದು ದನಿಗೂಡಿ
ಎಲೆ ಮೇಲೆ ಕಾಲೂರಿ ಹನಿಯೊಂದು ಹೊಳಪಾಯ್ತು ಇನ್ನೂ..
ಎಂದೆಂದು ಇರುವಂಥ ಮಳೆಬಿಲ್ಲೆ ಮುಡಿದಾಯ್ತು ಬಾನು
ಎಳೆ ಬಿಸಿಲ ನೆನಪಾಗಿ ಅತ್ತಂತೆ ಇಳಿ ಸಂಜೆ ಆ ಹೂವು
ನುಣುಪಾದ ಈ ಕೀಲಿ ಎದೆಗೆನೆ ಇರಿದಂತೆ ಆ ಸಾವು
ಬೇರಿರದ ಮರಕೆ ಬಿರುಗಾಳಿ ಬಡಿದಾಗ
ನೋವಿರದ ಜಾಗ ಇರದಾಗಿದೆ
ಬಾಯಾರಿ ಸೂರ್ಯ ಬಿಸಿಲಾಗಿ ನಿಂತಾಗ
ಸಾಗರವು ಕೂಡ ಬರಿದಾಗಿದೆ
ಹಾಲಿರದೆ ಪಾಲಿರಿದು ಹೋದಂತೆ ಈ ಊರ ಕೇರಿ
ಸುಳಿಯೊಂದು ನೀರಿಳಿದು ತಡೆದಂತೆ ನದಿಯ ದಾರಿ
ಉಳಿದವರು ಕಂಡಂತೆ
ಚಿತ್ರ ನೋಡಿ