ಮನಸುಗಳ ಮಾತು ಮಧುರ
ಕೆ. ಕಲ್ಯಾಣ್
ಕೆ. ಕಲ್ಯಾಣ್
ನೆನಪುಗಳ ಮಾತು ಮಧುರ
ಮೌನಗಳ ಹಾಡು ಮಧುರ
ಕನಸೆ ಇರಲಿ, ನನಸೆ ಇರಲಿ
ಪ್ರೀತಿ ಕೊಡುವ ಕನಸೇ ಮಧುರ || ಪ ||
ಸಾವಿರ ಹೂಗಳ ಹುಡುಕಿದರು
ಚಂದ ಬೇರೆ ಗಂಧ ಬೇರೆ ಸ್ಪರ್ಶ ಒಂದೇ
ಸಾವಿರ ಹೃದಯವ ಹುಡುಕಿದರು
ಅಳತೆ ಬೇರೆ ಸೆಳೆತ ಬೇರೆ ಪ್ರೀತಿಯೊಂದೇ
ತಿಂಗಳ ಬೆಳಕನು ಹಿಡಿದು ಗಾಳಿಗೆ ಸವರೊ ಪ್ರೀತಿ
ಗಾಳಿಯ ಗಂಧವ ಕಡೆದು ಅಂದವ ಹೆಣೆಯೋ ಪ್ರೀತಿ
ಸಂಖ್ಯೆ ಇರದೇ ಗುಣಿಸೊ ಪ್ರೀತಿ
ನಿದ್ದೆ ನುಂಗಿ ಕುಣಿಸೊ ಪ್ರೀತಿ
ಶಬ್ದವಿರಲಿ ನಿಶ್ಯಬ್ದವಿರಲಿ
ಪ್ರೀತಿ ಕೊಡುವ ಶಬ್ದ ಮಧುರ || ೧ ||
ಸಾವಿರ ಹಾಡನು ಹುಡುಕಿದರು
ತಾಳ ಬೇರೆ ಮೇಳ ಬೇರೆ ಸ್ವರಗಳೊಂದೇ
ಸಾವಿರ ಪ್ರೇಮಿಯ ಹುಡುಕಿದರು
ತವಕ ಬೇರೆ ಪುಳಕ ಬೇರೆ ಪ್ರೀತಿಯೊಂದೇ
ನದಿಗಳ ಕಲರವಗಳಲಿ ಅಲೆಗಳು ತೊಯೊ ಪ್ರೀತಿ
ಅಲೆಗಳ ಹೊಸತನ ಕಡೆದು ಕಲೆಗಳ ಹೆಣೆಯೊ ಪ್ರೀತಿ
ಚಿಲುಮೆಯಂತೆ ಚಿಮ್ಮೊ ಪ್ರೀತಿ
ಕುಲುಮೆಯೊಳಗೆ ಕಾಯ್ಸೊ ಪ್ರೀತಿ
ಸ್ವಾರ್ಥವಿರಲಿ ನಿಸ್ವಾರ್ಥವಿರಲಿ
ಪ್ರೀತಿ ಕೊಡುವ ಸ್ವಾರ್ಥ ಮಧುರ || ೨ ||