ಪ್ರೇಮದ ಕಾದಂಬರಿ

ಬಂಧನ
ಚಿ|| ಉದಯ ಶಂಕರ್

ಪ್ರೇಮದ ಕಾದಂಬರಿ ಬರೆದನು ಕಣ್ಣೀರಲಿ

ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ || ಪ ||

ಮೊದಲ ಪುಟಕೂ ಕೊನೆಯ ಪುಟಕೂ ನಡುವೆ ಎನಿತು ಅಂತರ

ಬಂದು ಹೋಗುವ ಸ್ನೇಹ ಸಾವಿರ ನಿಮ್ಮ ಬಂಧ ನಿರಂತರ|| ೧ ||

ನನ್ನ ಕಥೆಗೆ ಅಂತ್ಯ ಬರೆದು ಕವಿಯು ಹರಸಿದ ನನ್ನನು

ಕೊನೆಯ ಉಸಿರಲಿ ಒಂದೇ ಆಸೆ ದೈವ ಹರಸಲಿ ನಿಮ್ಮನು || ೨ ||