ಇವನ್ಯಾರ ಮಗನೋ
ಜನುಮದ ಜೋಡಿಇವನ್ಯಾರ ಮಗನೋ ಹಿಂಗವ್ನಲ್ಲ
ಇವಳ್ಯಾರ ಮಗಳೋ ಹಿಂಗವ್ಳಲ್ಲ
ಮಹಾಲಕ್ಷ್ಮಿ ರೂಪ, ಶೂರ ಭೂಪ
ಕಣ್ಣಿಂದ್ಲೆ ಸೆಳಕೊಂಡ್ಲೆ ಹ್ಞಾ.. ಹ್ಞಾ.. ಹ್ಞಾ || ಪ ||
ಮನಸೆಲ್ಲ ಇವನಿಂದ ರಾಟೆ ತೊಟ್ಳಾಯ್ತು
ಈ ತೊಟ್ಲಾ ತುಂಬೆಲ್ಲಾ ಇವ್ನೆ ಕುಂತಾಯ್ತು
ಎದೆ ಈಗ ಇವಳಿಂದ ಗಿರಗಿಟ್ಳೆ ಆಯ್ತು
ಇವಳ್ ಹಿಂದೆ ಹಿಂದೆನೇ ಅಲೆಯೋಕ್ ಶುರುವಾಯ್ತು
ಏನು ನವಿರು ಕೂಗು ಹೆಸರು ಹೇಗೆ ಇರಬಹುದಪ್ಪ
ನಾಳೆ ಇವನು ಆದ್ರೆ ಗೆಳೆಯ ಹ್ಯಾಗೆ ಕರಿಬಹುದಪ್ಪ
ಇವಳೇನಾ ಸಿರಿದೇವೆ ಹ್ಞಾ.. ಹ್ಞಾ.. ಹ್ಞಾ || ೧ ||
ಜಾತ್ರೆಯ ನೋಡೋಕೆ ನೊಡಿ ಕೊಂಡಾಡೋಕೆ
ಶಿವನೇ ಅವತಾರನ ಎತ್ತಿ ಬಂದವ್ನೋ
ಕೈಲಾಸ ಗಿರಿಯಿಂದ ಭೂಲೋಕ ಸುತ್ತೋಕೆ
ಪಾರ್ವತಿ ಈ ವೇಷ ತಾಳಿ ಬಂದಾಳೊ
ಏನು ಇವನ ಆಸೆ ಒಳಗೆ ಯಾರ ಪಟವೋ ಕಾಣೆ
ಯಾವ ಪದವ ಹೇಳದೇನೆ ನನ್ನ ಸೆಳೆದ ಜಾಣೆ
ಒಲಿದಾರೆ ಇವಗೇನೆ ಹ್ಞಾ.. ಹ್ಞಾ.. ಹ್ಞಾ || ೨ ||
ಜನುಮದ ಜೋಡಿ
ಚಿತ್ರ ನೋಡಿ