೨೦೧೯ ರ ಸಾರ್ವತ್ರಿಕ ಚುನಾವಣೆಯು ಏಪ್ರಿಲ್ 11 ರಿಂದ 19 ಮೇ 2019 ವರೆಗೆ ಏಳು ಹಂತಗಳಲ್ಲಿ ಭಾರತದ ೧೭ ನೇ ಲೊಕಸಭೆಗಾಗಿ ನಡೆಯಿತು. ಈ ಚುನಾವಣೆಯಲ್ಲಿ ಸುಮಾರು ೯೦ ಕೋಟಿ ಭಾರತೀಯರು ಮತ ಚಲಾಯಿಸಲು ಅರ್ಹರಾಗಿದ್ದು, ಇದರಲ್ಲಿ ೬೭% ರಷ್ಟು ಭಾರತೀಯರು ತಮ್ಮ ಅಮೂಲ್ಯವಾದ ಮತ ಚಲಾಯಿಸಿದ್ದಾರೆ. ಇದು ಈವರೆಗಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಅತ್ಯಧಿಕವಾಗಿದೆ.
೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ೫೪೨ ಕ್ಷೇತ್ರಗಳಿಗಾಗಿ ಮತದಾನ ಏಳು ಹಂತಗಳಲ್ಲಿ ನಡೆದಿದೆ.
ಕರ್ನಾಟಕ ರಾಜ್ಯದ ೨೮ ಕ್ಷೇತ್ರಗಳ ಲೋಕಸಭಾ ಚುನಾವಣಾ ಫಲಿತಾಂಶ ಕೆಳಗಿನಂತಿದೆ.