ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಕೂಡುವುದಕ್ಕೆ ಸಂಧಿ ಎಂದು ಹೆಸರು.

 1. ಸಂಧಿಯಾಗುವಾಗ ಸ್ವರದ ಮುಂದೆ ಸ್ವರ ಬಂದರೆ ಸ್ವರಸಂಧಿ ಎನಿಸುವುದು.

  ಸ್ವರಸಂಧಿ = ಸ್ವರ + ಸ್ವರ

 2. ಸಂಧಿಯಾಗುವಾಗ ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ಸ್ವರ ಬಂದರೆ ವ್ಯಂಜನ ಸಂಧಿ ಎನಿಸುವುದು.

  ವ್ಯಂಜನ ಸಂಧಿ = ಸ್ವರ + ವ್ಯಂಜನ

  ವ್ಯಂಜನ ಸಂಧಿ = ವ್ಯಂಜನ + ಸ್ವರ


ಕನ್ನಡ ಸಂಧಿಗಳು

ಕನ್ನಡ ಸಂಧಿಯಲ್ಲಿ ಲೋಪ, ಆಗಮ, ಆದೇಶ ಎಂದು ಮೂರು ವಿಧಗಳುಂಟು.

 1. ಲೋಪ ಸಂಧಿ

  ಸಂಧಿ ಕಾರ್ಯ ನಡೆದಾಗ ಒಂದು ಅಕ್ಷರವು ಬಿಟ್ಟು ಹೋದರೆ 'ಲೋಪ ಸಂಧಿ' ಎನಿಸುವುದು.


  ಉದಾ:

  ನಾವು + ಎಲ್ಲಾ = ನಾವೆಲ್ಲಾ ('ಉ' ಕಾರ ಲೋಪ)
  ಬೇರೆ + ಒಂದು = ಬೇರೊಂದು ('ಎ' ಕಾರ ಲೋಪ)
  ಮಾತು + ಇಲ್ಲ = ಮಾತಿಲ್ಲ ('ಉ' ಕಾರ ಲೋಪ)
  ಮಾಡು + ಇಸು = ಮಾಡಿಸು ('ಉ' ಕಾರ ಲೋಪ)

  ಸಂಧಿಕಾರ್ಯ ಮಾಡಿದಾಗ ಅರ್ಥಕ್ಕೆ ಹಾನಿ ಬರಬಾರದು.

 2. ಆಗಮ ಸಂಧಿ

  ಸಂಧಿ ಕಾರ್ಯ ಮಾಡಿದಾಗ ಒಂದು ಅಕ್ಷರವು ಹೊಸದಾಗಿ ಬಂದು ಸೇರುವುದನ್ನು ಆಗಮ ಸಂಧಿ ಎನ್ನುವರು.

  ಸಂಧಿ ಕಾರ್ಯ ಮಾಡಿದಾಗ 'ಯ' ಕಾರವು ಆಗಮವಾದರೆ ಅದು ಯಕಾರಾಗಮ ಸಂಧಿ.


  ಉದಾ:

  ಕೆರೆ + ಅಲ್ಲಿ = ಕೆರೆಯಲ್ಲಿ
  ಗಾಳಿ + ಅನ್ನು = ಗಾಳಿಯನ್ನು
  ಮಳೆ + ಇಂದ = ಮಳೆಯಿಂದ
  ಮೇ + ಇಸು = ಮೇಯಿಸು
 3. ಆದೇಶ ಸಂಧಿ

 4. ಸಂಧಿಯಾಗುವಾಗ ಒಂದು ವ್ಯಂಜನದ ಸ್ಥಾನದಲ್ಲಿ ಮತ್ತೊಂದು ಬರುವುದಕ್ಕೆ ಆದೇಶ ಸಂಧಿಯೆಂದು ಕರೆಯುತ್ತಾರೆ.

  ಆದೇಶ ಸಂಧಿಯಲ್ಲಿ ಉತ್ತರ ಪದದ ಮೊದಲಲ್ಲಿ ಇರುವ ಕ, ತ, ಪ ಎಂಬ ವ್ಯಂಜನಗಳಿಗೆ ಪ್ರತಿಯಾಗಿ, ಕ್ರಮವಾಗಿ ಗ, ದ, ಬ ಎಂಬ ವ್ಯಂಜನಗಳು ಆದೇಶವಾಗುವುವು.


  ಉದಾ:

  ಮಳೆ + ಕಾಲ = ಮಳೆಗಾಲ
  ಬೆಟ್ಟ + ತಾವರೆ = ಬೆಟ್ಟದಾವರೆ
  ಕಣ್ + ಪನಿ = ಕಂಬನಿ
  ಹೊಸ + ಕನ್ನಡ = ಹೊಸಗನ್ನಡಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail