ಸಾರ್ವತ್ರಿಕ ಚುನಾವಣೆ - ೨೦೧೯
೨೦೧೯ ರ ಸಾರ್ವತ್ರಿಕ ಚುನಾವಣೆಯು ಏಪ್ರಿಲ್ 11 ರಿಂದ 19 ಮೇ 2019 ವರೆಗೆ ಏಳು ಹಂತಗಳಲ್ಲಿ ಭಾರತದ ೧೭ ನೇ ಲೊಕಸಭೆಗಾಗಿ ನಡೆಯಿತು. ಈ ಚುನಾವಣೆಯಲ್ಲಿ ಸುಮಾರು ೯೦ ಕೋಟಿ ಭಾರತೀಯರು ಮತ ಚಲಾಯಿಸಲು ಅರ್ಹರಾಗಿದ್ದು, ಇದರಲ್ಲಿ ೬೭% ರಷ್ಟು ಭಾರತೀಯರು ತಮ್ಮ ಅಮೂಲ್ಯವಾದ ಮತ ಚಲಾಯಿಸಿದ್ದಾರೆ. ಇದು ಈವರೆಗಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಅತ್ಯಧಿಕವಾಗಿದೆ.
ಭಾರತದ ಸಂವಿಧಾನದ ನಿರ್ದೇಶನದಂತೆ ಲೋಕಸಭೆಯಲ್ಲಿ ಗರಿಷ್ಠ ೫೫೨ (೫೫೦ ಚುನಾಯಿತ ಮತ್ತು ೨ ಆಂಗ್ಲೋ-ಇಂಡಿಯನ್) ಸದಸ್ಯರು ಹೊಂದಬಹುದಾಗಿದೆ. ಚುನಾಯಿತ ಸದಸ್ಯರಲ್ಲಿ ಯಾರು ಆಂಗ್ಲೋ-ಇಂಡಿಯನ್ ಆಗಿರದಿದ್ದ ಪಕ್ಷದಲ್ಲಿ ೨ ಆಂಗ್ಲೋ-ಇಂಡಿಯನ್ ಸದಸ್ಯರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.
ಪ್ರಸ್ತುತ ಲೋಕಸಭೆಯಲ್ಲಿ ಒಟ್ಟು ೫೪೫ ಸದಸ್ಯರಿದ್ದು, ಅವುಗಳಲ್ಲಿ ೫೩೦ ಕ್ಷೇತ್ರಗಳು ೨೯ ರಾಜ್ಯಗಳಿಗೆ, ೧೩ ಕ್ಷೇತ್ರಗಳು ೭ ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿವೆ.
೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ೫೪೨ ಕ್ಷೇತ್ರಗಳಿಗಾಗಿ ಮತದಾನ ಏಳು ಹಂತಗಳಲ್ಲಿ ನಡೆದಿದೆ.
ಕರ್ನಾಟಕ ರಾಜ್ಯ
ಕರ್ನಾಟಕದಲ್ಲಿ ೨೦೧೯ರ ಲೋಕಸಭಾ ಚುನಾವಣೆ ೨ ಹಂತಗಳಲ್ಲಿ ಏಪ್ರಿಲ್ ೧೮ ಮತ್ತು ಏಪ್ರಿಲ್ ೨೧ ರಂದು ತಲಾ ೧೪ ಕ್ಷೇತ್ರಗಳಲ್ಲಿ ನಡೆಯಿತು.
ಕರ್ನಾಟಕ ರಾಜ್ಯದ ೨೮ ಕ್ಷೇತ್ರಗಳ ಲೋಕಸಭಾ ಚುನಾವಣಾ ಎಣಿಕೆ ಫಲಿತಾಂಶ ಕೆಳಗಿನಂತಿದೆ.
ಕ್ಷೇತ್ರ | ಮುನ್ನಡೆ/ಗೆದ್ದ ಅಭ್ಯರ್ಥಿ | ಪಕ್ಷ | |
---|---|---|---|
1 | ಚಿಕ್ಕೋಡಿ | ಅಣ್ಣಾ ಸಾಹೇಬ್ ಜೊಲ್ಲೆ | ಭಾರತೀಯ ಜನತಾ ಪಕ್ಷ (BJP) |
೨ | ಬೆಳಗಾವಿ | ಅಂಗಡಿ ಚೆನ್ನಬಸಪ್ಪ | ಭಾರತೀಯ ಜನತಾ ಪಕ್ಷ (BJP) |
೩ | ಬಾಗಲಕೋಟೆ | ಜಿ. ಪಿ. ಚಂದನಗೌಡ | ಭಾರತೀಯ ಜನತಾ ಪಕ್ಷ (BJP) |
೪ | ಬಿಜಾಪುರ | ಜಿಗಜಿನಗಿ ರಮೇಶ್ ಚಂದಪ್ಪ | ಭಾರತೀಯ ಜನತಾ ಪಕ್ಷ (BJP) |
೫ | ಕಲಬುರಗಿ | ಉಮೇಶ್ ಜಾಧವ್ | ಭಾರತೀಯ ಜನತಾ ಪಕ್ಷ (BJP) |
೬ | ರಾಯಚೂರು | ರಾಜಾ ಅಮರೇಶ್ವರ ನಾಯ್ಕ್ | ಭಾರತೀಯ ಜನತಾ ಪಕ್ಷ (BJP) |
೭ | ಬೀದರ್ | ಭಗವಂತ ಖೂಬಾ | ಭಾರತೀಯ ಜನತಾ ಪಕ್ಷ (BJP) |
೮ | ಕೊಪ್ಪಳ | ಕರಡಿ ಸಂಗಣ್ಣ ಅಮರಪ್ಪ | ಭಾರತೀಯ ಜನತಾ ಪಕ್ಷ (BJP) |
೯ | ಬಳ್ಳಾರಿ | ವೈ. ದೇವೇಂದ್ರಪ್ಪ | ಭಾರತೀಯ ಜನತಾ ಪಕ್ಷ (BJP) |
1೦ | ಹಾವೇರಿ | ಎಸ್. ಸಿ. ಉದಾಸಿ | ಭಾರತೀಯ ಜನತಾ ಪಕ್ಷ (BJP) |
1೧ | ಧಾರವಾಡ | ಪ್ರಹ್ಲಾದ್ ಜೋಷಿ | ಭಾರತೀಯ ಜನತಾ ಪಕ್ಷ (BJP) |
1೨ | ಉತ್ತರ ಕನ್ನಡ | ಅನಂತ್ ಕುಮಾರ್ ಹೆಗ್ಡೆ | ಭಾರತೀಯ ಜನತಾ ಪಕ್ಷ (BJP) |
1೩ | ದಾವಣಗೆರೆ | ಜಿ. ಎಂ. ಸಿದ್ದೇಶ್ವರ್ | ಭಾರತೀಯ ಜನತಾ ಪಕ್ಷ (BJP) |
1೪ | ಶಿವಮೊಗ್ಗ | ಬಿ. ವೈ. ರಾಘವೇಂದ್ರ | ಭಾರತೀಯ ಜನತಾ ಪಕ್ಷ (BJP) |
1೫ | ಉಡುಪಿ-ಚಿಕ್ಕಮಗಳೂರು | ಶೋಭಾ ಕರಂದ್ಲಾಜೆ | ಭಾರತೀಯ ಜನತಾ ಪಕ್ಷ (BJP) |
1೬ | ಹಾಸನ | ಪ್ರಜ್ವಲ್ ರೇವಣ್ಣ | ಜನತಾದಳ (ಜಾತ್ಯಾತೀತ) (JDS) |
1೭ | ದಕ್ಷಿಣ ಕನ್ನಡ | ನಳಿನ್ ಕುಮಾರ್ ಕಟೀಲ್ | ಭಾರತೀಯ ಜನತಾ ಪಕ್ಷ (BJP) |
1೮ | ಚಿತ್ರದುರ್ಗ | ಎ. ನಾರಾಯಣಸ್ವಾಮಿ | ಭಾರತೀಯ ಜನತಾ ಪಕ್ಷ (BJP) |
1೯ | ತುಮಕೂರು | ಜಿ. ಎಸ್. ಬಸವರಾಜ್ | ಭಾರತೀಯ ಜನತಾ ಪಕ್ಷ (BJP) |
೨೦ | ಮಂಡ್ಯ | ಸುಮಲತಾ ಅಂಬರೀಷ್ | ಸ್ವತಂತ್ರ |
೨೧ | ಮೈಸೂರು | ಪ್ರಪ್ ಸಿಂಹ | ಭಾರತೀಯ ಜನತಾ ಪಕ್ಷ (BJP) |
೨೨ | ಚಾಮರಾಜನಗರ | ವಿ. ಶ್ರೀನಿವಾಸ ಪ್ರಸಾದ್ | ಭಾರತೀಯ ಜನತಾ ಪಕ್ಷ (BJP) |
೨೩ | ಬೆಂಗಳೂರು ಗ್ರಾಮೀಣ | ಡಿ. ಕೆ. ಸುರೇಶ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) |
೨೪ | ಬೆಂಗಳೂರು ಉತ್ತರ | ಡಿ. ವಿ. ಸದಾನಂದಗೌಡ | ಭಾರತೀಯ ಜನತಾ ಪಕ್ಷ (BJP) |
೨೫ | ಬೆಂಗಳೂರು ಸೆಂಟ್ರಲ್ | ಪಿ. ಸಿ. ಮೋಹನ್ | ಭಾರತೀಯ ಜನತಾ ಪಕ್ಷ (BJP) |
೨೬ | ಬೆಂಗಳೂರು ದಕ್ಷಿಣ | ತೇಜಸ್ವಿ ಸೂರ್ಯ | ಭಾರತೀಯ ಜನತಾ ಪಕ್ಷ (BJP) |
೨೭ | ಚಿಕ್ಕಬಳ್ಳಾಪುರ | ಬಿ. ಎನ್. ಬಚ್ಚೇ ಗೌಡ | ಭಾರತೀಯ ಜನತಾ ಪಕ್ಷ (BJP) |
೨೮ | ಕೋಲಾರ | ಎಸ್. ಮುನಿಸ್ವಾಮಿ | ಭಾರತೀಯ ಜನತಾ ಪಕ್ಷ (BJP) |