ಜಾನಪದ ಗೀತೆಗಳು

ಯಾಕೆ ಬಡ್ದಾಡ್ತಿ ತಮ್ಮ

ಜಾನಪದ

ರಚನೆ

ಜಾನಪದ

ಯಾಕೆ ಬಡ್ದಾಡ್ತಿ ತಮ್ಮ

ಮಾಯ ಮೆಚ್ಚಿ ಸಂಸಾರ ನೆಚ್ಚಿ

ನೀನೊಗದರಿಯೆ ತಮ್ಮ

ಕಣ್ಣಮುಚ್ಚಿ ಮಣ್ಣಮುಚ್ಚಿ

ಹೆಂಡ್ರು ಮಕ್ಕಳಿರುವರು ತಮ್ಮ ಎಲ್ಲೀತನಕ

ಇದ್ರೆ ತಿಂಬೋ ತನಕ

ಸತ್ತಾಗ ಬರುವರು ತಮ್ಮ ಗುಣಿತನಕ

ಮಣ್ಣು ಮುಚ್ಚೊ ತನಕ

ಅಣ್ಣ ತಮ್ಮ ಅಕ್ಕತಂಗಿ ಎಲ್ಲಿತನಕ

ಬದುಕಿ ಬೆಳೆಯೋ ತನಕ

ಸತ್ತಾಗ ಬರುವರು ತಮ್ಮ ಗುಣಿತನಕ

ಮಣ್ಣು ಮುಚ್ಚೊ ತನಕ

ನೆಂಟ್ರು ಇಷ್ಟ್ರು ಬರುವರು ತಮ್ಮ ಎಲ್ಲಿ ತನಕ

ಇದ್ರೆ ತಿನ್ನೊತನಕ ತಿಂದು ತೇಗೋ ತನಕ

ಸತ್ತಾಗ ಬರುವರು ತಮ್ಮ ಗುಣಿತನಕ

ಮಣ್ಣು ಮುಚ್ಚೊ ತನಕ

ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲೀ ತನಕ

ನಿನ್ನ ಕೊರಳಿಗೆ ಕುಣಿಕೆ ಬೀಳೋ ತನಕ

ನಿನ್ನಾಸೆ ಪ್ರಾಣಪಕ್ಷಿ ಹಾರೋ ತನಕ

ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಕ

ಹಂಚಿಕೊಳ್ಳಿ:
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು

ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!

ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.