ವಸಂತ ಬಂದ ಋತುಗಳ ರಾಜ ತಾಬಂದ
ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ, ಹಕ್ಕಿಗಳುಲಿಯಗಳೆ ಚೆಂದ
ಕುವೂ, ಜಗ್ ಜಗ್, ಪೂವಿ ಟೂವಿಟ್ಟವೂ || ಪ ||
ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ
ಇನಿಯರ ಬೇಟ, ಬನದಲಿ ಬೆಳದಿಂಗಳೂಟ
ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಠ,
ಕುವೂ, ಜಗ್ ಜಗ್, ಪೂವಿ ಟೂವಿಟ್ಟವೂ ||
ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲಾ ಕಂಪು
ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
ಕುವೂ, ಜಗ್ ಜಗ್, ಪೂವಿ ಟೂವಿಟ್ಟವೂ ||
ಬಂದ ವಸಂತ ನಮ್ಮಾ ರಾಜ ವಸಂತ
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು
ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!
ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.
