ಕೆ.ವಿ. ಪುಟ್ಟಪ್ಪ

ಉದಯ ಗಗನದಲಿ ಅರುಣ ಛಾಯೆ

ಜಗದ ಜಿವನ್ಕೆ ಚೇತನವೀಯೆ

ನಿನ್ನಯ ಗಾನನ ಸುಮಧುರ ಮಾಯೆ

ವನದಿಂಬರಕೇರುವುದು

ಕೋರಿಕೆಗಳು ಬಾಯಾರುವುದು || ಪ ||

ಪ್ರಭಾತ ಮೌನವೆಚ್ಚರ ಮಾಡಿ

ಕಾಡು ನಾಡುಗಳ ತುಂಬಿ ತುಳುಕಾಡಿ

ಜಗನ್ನಿದ್ರೆಗೆ ಜೋಗುಳ ಹಾಡಿ

ಬ್ರಹ್ಮವನೆ ತೂಗಾಡುವುದೋ

ಕ್ರಾಂತಿಗೆ ಶಾಂತಿಯ ನಿಡುವುದೋ ||

ಕೇಳಿದವರಲ್ಲದ ತಿಳಿಯದು ನಿನ್ನ

ಕಂಠದ ವೈಖರಿ ತುದಿಯಲಿ ನಿನ್ನಾ

ಬಾಳಿನ ಬಯಕೆಯು ನಿನ್ನಯ ಗಾನ

ನಿನಗೆ ನಮೋ ಕಾಜಾಣ ||

ಓ ವನಗಾಯಕಾ... ವನವಾಗೀಶಾ...

ನಿನ್ನಯ ಕಾನನ ಕೂಜನ ಪಾಶಾ...

ಕಬ್ಬಿಗನಿಗೆ ಮತ್ತಿನಾ ವೇಶಾ...

ಸ್ಮರಛಾಪಕೆ ನೀ ಸ್ಮರಬಾಣ... ||