ಡಿ. ವಿ. ಗುಂಡಪ್ಪ

ನಟನವಾಡಿದಳ್ ತರುಣಿ ನಟನವಾಡಿದಳ್

ಕಟು ಮುಖಾಭಿನಯಗಳಿಂದ ನಟನವಾಡಿದಳ್ ||

ಕೊರವಿತಿ ವೋಲು ವೇಷ ತೊಟ್ಟು

ಸ್ಮರನ ಗುಟ್ಟಿ ಮನದೊಳಿಟ್ಟು ನಟನವಾಡಿದಳ್ ||

ಢಮರು ಢಣರು ಢನ್ ಢಣಾರನೆ

ಚಿಲಿಕೆ ತಾಳ ಚಟ ಚಟನೆ ನಟನವಾಡಿದಳ್ ||

ಕುಲುಕಿ ಬಳುಕಿ ಬಳ್ಳಿಯೊಡನೆ

ಒಲಿದು ನಲಿದು ಕುಣಿದು ಲಲನೆ ನಟನವಾಡಿದಳ್ ||

ಈಶ ತಾಂಡವದಲ್ಲೊವೆ ರಾಸ ರಭಸದಿಂದಲೊಮ್ಮೆ

ಆಶೆನೋಟದಿಂದಲೊಮ್ಮೆ ಕೇಶ ವೇಷ ದಾಸಿ ಇವಳು

ನಟನವಾಡಿದಳ್ ತರುಣಿ ನಟನವಾಡಿದಳ್ ||