ವಂದಿಪೆ ನಿನಗೆ ಗಣನಾಥ

ಪುರಂದರ ದಾಸರು

ವಂದಿಪೆ ನಿನಗೆ ಗಣನಾಥ

ಮೊದಲೊಂದಿಪೆ ನಿನಗೆ ಗಣನಾಥ || ಪ ||

ಬಂದ ವಿಘ್ನಗಳ ಕಳೆ ಗಣನಾಥ || ಅ.ಪ. ||

ಆದಿಯೊಳು ನಿನ್ನ ಪಾದ

ಪೂಜಿಸಿದ ಧರ್ಮರಾಯ

ಸಾಧಿಸಿದ ರಾಜ್ಯ ಗಣನಾಥ || 1 ||

ಹಿಂದೆ ರಾವಣನು ಮದ

ದಿಂದ ನಿನ್ನ ಪೂಜಿಸದೆ

ಸಂದ ರಣದಲಿ ಗಣನಾಥ || ೨ ||

ಮಂಗಳ ಮೂರುತಿ ಗುರು

ರಂಗ ಪಿಠಲನ ಪಾದ

ಭೃಂಗನೇ ಪಾಲಿಸೋ ಗಣನಾಥ || ೩ ||