ಭಕ್ತಿಸುಧೆ

ಗುಮ್ಮನ ಕರೆಯದಿರೆ

ಗುಮ್ಮನ ಕರೆಯದಿರೆ, ಅಮ್ಮ ನೀನು

ಗುಮ್ಮನ ಕರೆಯದಿರೆ || ಪ ||

ಸುಮ್ಮನೆ ಇದ್ದೇನು, ಅಮ್ಮಿಯ ಬೇಡೆನು

ಮುಮ್ಮು ಉಣ್ಣುತ್ತೇನೆ ಅಮ್ಮ ಅಳುವುದಿಲ್ಲ || ಅ.ಪ. ||

ಹೆಣ್ಣುಗಳಿರುವಲ್ಲಿ ಪೋಗಿ ಅವರ

ಕಣ್ಣು ಮುಚ್ಚುವುದಿಲ್ಲ ಚಿಣ್ಣರ ಬಡಿಯೆನು

ಅಣ್ಣನ ಬೈಯೆನು, ಬೆಣ್ಣೆಯ ಬೇಡೆನು

ಮಣ್ಣು ತಿನ್ನುವುದಿಲ್ಲ || 1 ||

ಬಾವಿಗೆ ಪೋಗೆ ಕಾಣೆ ಅಮ್ಮ ನಾನು

ಹಾವಿನೊಳಾಡೆ ಕಾಣೆ, ಗೋವಿನ ಮೊಲೆಯೂಡೆ

ಕರುಗಳ ಬಿಡೆ ನೋಡೆ

ದೇವರಂತೆ ಒಂದು ಠಾವಿಲಿ ಕೂಡುವೆ || ೨ ||

ಮಗನ ಮಾತು ಕೇಳಿ ಗೋಪಿ ದೇವಿ

ಮುಗುಳ ನಗೆ ನಗುತ

ಜಗದೊಡೆಯ ಶ್ರೀ ಪುರಂದರ ವಿಠಲನ

ಬಿಗಿದಪ್ಪಿಕೊಂಡಳು ಮೋಹದಿಂದಲಾಗ || ೩ ||

ಹಂಚಿಕೊಳ್ಳಿ:
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು

ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!

ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.