ಗಜವದನ ಬೇಡುವೆ

ಪುರಂದರ ದಾಸರು

ಗಜವದನ ಬೇಡುವೆ ಗೌರೀತನಯ || ಪ ||

ತ್ರಿಜಗ ವಂದಿತನೆ ಸುಜನರ ಪೊರೆವನೆ || ಅ.ಪ. ||

ಪಾಶಾಂಕುಶಧರ ಪರಮಪವಿತ್ರ

ಮೂಷಕ ವಾಹನ ಮುನಿಜನ ಪ್ರೇಮ || 1 ||

ಮೋದದಿ ನಿನ್ನಯ ಪಾದವ ತೋರೋ

ಸಾಧುವಂದಿತನೆ ಆದರದಿಂದಲಿ || ೨ ||

ಸರಸಿಜನಾಭ ಶ್ರೀ ಪುರಂದರವಿಠಲನ

ನಿರುತ ನೆನೆಯುವಂತೆ ದಯಮಾಡೋ || ೩ ||