ಬಿನ್ನಹಕೆ ಬಾಯಿಲ್ಲವಯ್ಯ

ಪುರಂದರ ದಾಸರು

ಬಿನ್ನಹಕೆ ಬಾಯಿಲ್ಲವಯ್ಯ || ಪ ||

ಅನಂತ ಅಪರಾಧ ಎನ್ನಲ್ಲಿ ಇರಲಾಗಿ || ಅಪ ||

ಶಿಶುಮೋಹ ಸತಿಮೋಹ

ಜನನಿ ಜನಕರ ಮೋಹ

ರಸಿಕಬ್ರಾತರ ಮೋಹ, ರಾಜಮೋಹ

ಪಶುಮೋಹ ಭೂಮೋಹ

ಬಂಧುವರ್ಗದ ಮೋಹ

ಅಸುರಾರಿ ನಿನ್ನ ಮರೆತೆ

ನಕಟಕಟ ಕಾಯೋ || ೧ ||

ಅನಮದ ಅರ್ಥಮದ

ಅಖಿಲ ವೈಭವದ ಮದ

ಮುನ್ನ ಪ್ರಾಯದ ಮದವು

ರೂಪ ಮದವು

ವೆಂತೆಂಬ ಮದದಿಂದ || ೨ ||

ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂದಾಸೆ

ಅಷ್ಟು ದೊರಕಿದರೆ ಮತ್ತಿಷ್ಟರಾಸೆ

ಕಷ್ಟ ಬೇಡೆಂಬಾಸೆ

ಕಡು ಸುಖವ ಕಾಂಬಾಸೆ

ನಷ್ಟ ಜೀವನದಾಸೆ

ಪುರಂದರ ವಿಠಲ || ೩ ||