ಶಂಕರ ಶಶಿಧರ

ಎಸ್. ಪಿ. ಬಾಲಸುಬ್ರಮಣ್ಯಂ ಕೆ. ವಿ. ಮಹಾದೇವನ್

ಓಂ....... ಓಂ....... ಓಂ

ಶಂಕರ ಶಶಿಧರ ಗಜ ಚರ್ಮಮಾಂಬರ ಗಂಗಾಧರ ಹರನೇ

ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ || ಪ ||

ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ

ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ

ಓಂ....... ಓಂ....... ಓಂ ....... ಓಂ

ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ,

ಶೂಲಿಕ ಪರ್ತಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ

ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ,

ಶೂಲಿಕ ಪರ್ತಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ

ಜಯ ಮೃತ್ಯುಂಜಯನೇ ........

ಭಕುತಿಗೆ ಬೇಗನೆ ಒಲಿಯುವ ದೇವನೇ ಜಯ ತ್ರಿಪುರಾಂತಕನೇ

ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬ ಸದಾಶಿವನೇ

ಭಕುತಿಗೆ ಬೇಗನೆ ಒಲಿಯುವ ದೇವನೇ ಜಯ ತ್ರಿಪುರಾಂತಕನೇ

ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬ ಸದಾಶಿವನೇ

ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ

ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ

ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ

ಲೋಕವ ರಕ್ಷಿಸೇ ವಿಷವನು ಕುಡಿದ ಕರುಣಾಸಾಗರನೇ

ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ

ಲೋಕವ ರಕ್ಷಿಸೇ ವಿಷವನು ಕುಡಿದ ಕರುಣಾಸಾಗರನೇ

ಕರುಣಾಸಾಗರನೇ

ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ

ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ