ಮಧುವನ ಕರೆದರೆ

ಚಿನ್ಮಯಿ ಜಯಂತ್ ಕಾಯ್ಕಿಣಿ ಸಾಧು ಕೋಕಿಲ

ಮಧುವನ ಕರೆದರೆ

ತನು ಮನ ಸೆಳೆದರೆ

ಶರಣಾಗು ನೀನು ಆದರೇ|| ಪ ||

ಬಿರುಗಾಳಿಯಲ್ಲಿ ತೇಲಿ

ಹೊಸ ಘಳಿಗೆ ಬಂದಿದೆ

ಕನಸೊಂದು ಮೈಯ ಮುರಿದು

ಬಾ ಬಳಿಗೆ ಎಂದಿದೇ

ಶರಣಾಗು ಆದರೆ

ಸೆರೆ ಆಗು ಆದರೇ

ಕಂಗಳಲಿ ಕನಸಿನ ಕುಲುಮೆ

ಹೊಳೆಯುತಿದೆ ಜೀವದ ಒಲುಮೆ

ಬೆಳಕಲ್ಲಿ ನೋಡು ಆದರೇ

ಮೈಯೆಲ್ಲಾ ಚಂದ್ರನ ಗುರುತು

ಹೆಸರೆಲ್ಲೊ ಹೋಗಿದೆ ಮರೆತು

ನಾನ್ಯಾರು ಹೇಳು ಆದರೇ

ಮನಸಿನ ಹಸಿ ಬಣ್ಣಗಳಲ್ಲಿ

ನೀನೆಳೆವಾ ರೇಖೆಗಳಲ್ಲಿ

ನಾ ಮೂಡಬೇಕು ಆದರೇ

ಎದುರಿದ್ದು ಕರೆಯುವೆ ಏಕೆ

ಜೊತೆಯಿದ್ದು ಮರೆಯುವೆ ಏಕೆ

ನಿನ್ನೊಲವು ನಿಜವೆ ಆದರೇ