ಆಹಾ ಇದೇನು ನಡೆ

ಪಿ. ಬಿ. ಶ್ರೀನಿವಾಸ್ ಆರ್. ಎನ್. ಜಯಗೋಪಾಲ್ ಟಿ. ಜಿ. ಲಿಂಗಪ್ಪ

ಆಹಾ ಆಹಾ ಇದೇನು ನಡೆ

ಒಹೋ ಒಹೋ ಈ ಷೋಕು ನಡೆ

ಲೆಫ್ಟು ರೈಟು ಹೆಜ್ಜೆ ಕವಾತು ಮಾಡಿತೋ

ಕೊಕ್ಕರೆಯ ಕಂಡು ಸವಾಲು ಹಾಕಿತೊ || ಪ ||

ಮೇಲೆ ನೋಡೆ ಕಂಡುದೇನು ಬರೀ ಆಗಸ

ಈ ಹೆಣ್ಣನು ಈ ಕಣ್ಣನು ನೀ ನೋಡೆ ಸಂತಸ

ಪಪ್ಪರ ಪಪ್ಪಾಪಂ ಅಹ ಪಪ್ಪರ ಪಪ್ಪಾರ ಪಂ

ಈ ನಾಟಕ ಬೂಟಾಟಿಕೆ ನಾ ಕಾಣುದುದೇನು || 1 ||

ಮಾತನಾಡದಂತೆ ಬಾಯಿ ಬೀಗ ಹಾಕಿಕೋ

ಆ ಬೀಗವ ನಾ ತೆಗೆಯುವೆ ತಾನೆಂದು ಮರೆಯಿತೊ

ಪಪ್ಪರ ಪಪ್ಪಾಪಂ ಅಹ ಪಪ್ಪರ ಪಪ್ಪಾರ ಪಂ

ಹುಸಿ ಕೋಪಕೆ ಬಿಸಿ ತಾಪಕೆ ನಾ ಹೆದರುವೆನೇನು || ೨ ||