ಭಕ್ತಿಸುಧೆ

ಇದು ಭಾಗ್ಯ ಇದು ಭಾಗ್ಯ

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ || ಪ ||

ಪದುಮನಾಭನ ಪಾದಭಜನೆ ಸುಖವಯ್ಯಾ || ಅ.ಪ. ||

ಕಲ್ಲಾಗಿರಲು ಬೇಕು ಕಠಿಣ ಭವತೊರೆಯೊಳಗೆ

ಬಿಲ್ಲಾಗಿರಲು ಬೇಕು ಬಲ್ಲವರೊಳು

ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು

ಬೆಲ್ಲವಾಗಲುಬೇಕು ಬಂಧುಜನರೊಳಗೆ || 1 ||

ಬುದ್ಧಿಯಲಿ ತನುಮನವ ತಿದ್ದಿಕೊಳ್ಳಲುಬೇಕು

ಮುದ್ದಾಗಿರಬೇಕು ಮುನಿಯೋಗಿಗಳಿಗೆ

ಮಧ್ವಮತಾಬ್ಧಿಯೊಳು ಮೀನಾಗಿರಲು ಬೇಕು

ಶುದ್ಧನಾಗಿರಬೇಕು ಕರಣತ್ರಯಗಳಲಿ || ೨ ||

ವಿಷಯಭೋಗದ ತೃಣಕೆ ಉರಿಯಾಗಿರಲು ಬೇಕು

ನಿಶಿಹಗಲು ಶ್ರೀಹರಿಯ ನೆನೆಯಬೇಕು

ವಸುದೇವ ಶ್ರೀಪುರಂದರ ವಿಠಲರಾಯನ

ಹಸನಾದ ದಾಸನ ಸೇವಿಸಲುಬೇಕು || ೩ ||

ಹಂಚಿಕೊಳ್ಳಿ:
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು

ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!

ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.