ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು

ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು || ಪ ||

ವೇದಾಂತಿ ಹೇಳಿದನು ಈ ಹೆಣ್ಣು ಮಾಯೆ ಮಾಯೆ

ಕವಿಯೊಬ್ಬ ಕನವರಿಸಿದನು, ಹೂ ಇವಳೆ ಚೆಲುವೆ ಚೆಲುವೆ

ಇವಳ ಜೊತೆಯಲ್ಲಿ ನಾ ಸ್ವರ್ಗವನೇ ಗೆಲ್ಲುವೆ ||

ವೇದಾಂತಿ ಹೇಳಿದನು, ಈ ಬದುಕು ಶೂನ್ಯ ಶೂನ್ಯ

ಕವಿ ನಿಂತು ಸಾರಿದನು, ಓ ಇದು ಅಲ್ಲ ಶೂನ್ಯ

ಜನ್ಮ ಜನ್ಮದಿ ಸವಿದೆ ನಾನೆಷ್ಟು ಧನ್ಯ ಧನ್ಯ ||

ತಾತ್ವಿಕತೆ ಪುಟ್ಟಣ್ಣ ಕಣಗಾಲ್ 

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail