ಉಲ್ಲಾಸದ ಹೂಮಳೆ

ಶ್ರೇಯಾ ಗೋಶಾಲ್ ಎಸ್. ನಾರಾಯಣ್ ಮನೋ ಮೂರ್ತಿ

ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ

ಸಂಕೋಚದ ಹೊನ್ನೊಳೆ ಹರಿಯುತಿದೆ ಕಣ್ಣಲಿ

ಮುಂಜಾನೆಯು ನೀ, ಮುಸ್ಸಂಜೆಯು ನೀ,

ನನ್ನೆದೆಯ ಬಡಿತವು ನೀ, ಹೃದಯದಲ್ಲಿ ಬೆರೆತವ ನೀ,

ಮೊದಮೊದಲು ನನ್ನೊಳಗೆ ಉದಯಿಸಿದ

ಆ ಆಸೆಯು ನೀ, ನನ್ನವನೇ ಎಂದಿಗು ನೀ || ಪ ||

ನಾನನನ ನಾನನ ನಾನನನ ನಾನನ.....

ಮಾತಿಲ್ಲದೆ ಕಥೆ ಇಲ್ಲದೆ ದಿನವೆಲ್ಲ ಮೌನವಾದೆ

ನಾ ಕಳೆದು ಹೋದೆನು ಹುಡುಕಾಡಿ ಸೋತೆನು

ಹಸಿವಿಲ್ಲದೆ ನಿದಿರಿಲ್ಲದೆ ದಣಿವಾಗಲು ಇಲ್ಲ

ನನ್ನೊಳಗೆ ನೀನಿದ್ದರೆ ನನಗೇನು ಬೇಡವು

ನನ್ನ ಪಾಟವು ನೀ, ನನ್ನ ನೋಟವು ನೀ,

ನಾ ಬರೆವ ಲೇಖನಿ ನೀ,

ನಾ ಉಡುವ ಉಡುಗೆಯು ನೀ

ನನ್ನ ಸ್ನಾನದ ನೀರಲ್ಲಿಯು ಬೆರೆತಿದ್ದ ಚೆಲುವ ನೀನು

ಕನ್ನಡಿಯ ನೋಡಿದೆ, ನನ್ನೊಡನೆ ಕಾಡಿದೆ

ನಾ ಹಚ್ಚುವ ಕಾಡಿಗೆಯಲಿ ಅವಿತಿದ್ದ ಚೋರ ನೀನು

ನಾನಿಟ್ಟ ಕುಂಕುಮದೀ ಪಳಪಳನೆ ಹೊಳೆಯುವೆನು

ನಾ ಮುಡಿದ ಮಲ್ಲಿಗೆಗೆ ಪರಿಮಳ ನೀ,

ಒಡೆಯನು ನೀ, ನಾ ಮಲಗೊ ಹಾಸಿಗೆ ನೀ || ೨ ||