ನಿನ್ನ ನೋಡಲೆಂತೊ

ಸೋನು ನಿಗಮ್, ಶ್ರೇಯಾ ಗೋಶಾಲ್ ರಾಮ್ ನಾರಯಣ್ ವಿ. ಶ್ರೀಧರ್

ನಿನ್ನ ನೋಡಲೆಂತೊ ಮಾತನಾಡಲೆಂತೊ

ಮನಸ ಕೇಳತಲೆಂತೊ ಪ್ರೀತಿ ಹೇಳಲೆಂತೊ

ಅಹಾ ಒಂಥರಾಥರ ಹೇಳಲೊಂಥರಾಥರ ಕೇಳಲೊಂಥರಾಥರ || ಪ ||

ಹೋ... ಕಣ್ಣಿಗೇನು ಕಾಣದೆ ಸ್ಪರ್ಶವೇನು ಇಲ್ಲದೆ

ನೀನು ನನ್ನ ಕಾಡಿದೆ ಏನು ಅರ್ಥವಾಗದೆ

ಹಗಲು ರಾತ್ರಿ ನಿನ್ನದೆ ನೂರು ನೆನಪು ಮೂಡಿದೆ

ನನ್ನಲೇನೊ ಆಗಿದೆ ಹೇಳಲೇನು ಆಗದು

ಮನಸು ಮಾಯವೆಂತು ಓಹೋ.. ಮಧುರ ಭಾವವೆಂತೊ

ಪಯಣ ಎಲ್ಲಿಗೆತೊ ನಯನ ಸೇರುಲೆಂತೊ

ಮಿಲನವಾಗಲೆಂತೊ ಗಮನ ಎಲ್ಲೊ ಎಂತೊ

ಅಹಾ ಒಂಥರಾಥರ ಹೇಳಲೊಂಥರಾಥರ ಕೇಳಲೊಂಥರಾಥರ || ೧ ||

ಮೆಲ್ಲ ಮೆಲ್ಲ ಮೆಲ್ಲುವ ಸನ್ನೆಯಲ್ಲೆ ಕೊಲ್ಲುವ

ಸದ್ದೆ ಇರದ ಉತ್ಸವ ಪ್ರೀತಿಯೊಂದೆ ಎಲ್ಲವ

ಗಲ್ಲು ಗಲ್ಲು ಎನ್ನುವ ಹೃದಯ ಗೆಜ್ಜೆ ನಾದವ

ಪ್ರೀತಿ ತಂದ ರಾಗವ ತಾಳಲೆಂತೊ ಭಾವವ

ಹೃದಯದಲ್ಲಿ ಎಂತೊ ಉದಯವಾಯಿತೆಂತೊ

ಸನಿಹವಾಗಲೆಂತೊ ಕನಸ ಕಾಣಲೆಂತೊ

ಹರುಷ ಏನೊ ಎಂತೊ ಸೊಗಸ ಹೇಳಲೆಂತೊ

ಅಹಾ ಒಂಥರಾಥರ ಹೇಳಲೊಂಥರಾಥರ ಕೇಳಲೊಂಥರಾಥರ || ೨ ||