ಅರಳಿದ ತನುವಿದು ಅಂದವೋ ಅಂದ

ನಲಿದಿರುವ ಮನವಿನ್ನು ಚೆಂದವೋ ಚೆಂದ

ಸಂತೋಷದಿ ನೀನಿರು ಬರುವನು ಕಂದ || ಪ ||

ಮೆದುವಾಗಿ ನಡಿ ನಿನ್ನಾಸೆ ಏನು ನುಡಿ

ಬಯಕೆಗಳ ಸರವಿರಲಿ ಸಂಕೋಚವೇಕೆ

ದಿನವೆಲ್ಲ ನಗು ಆನಂದದಿಂದ ನಗು

ಬೆಳೆಯುತಿಹ ಹಸುಕಂದ ನಗುವಂತೆ ನಲ್ಲೆ

ಬದುಕೆಲ್ಲ ಹೀಗೆ ಇರು ಉಲ್ಲಾಸದಿಂದ || ೧ ||

ಒಲವೆಂಬ ಲತೆ ಹೂವೊಂದು ಬಿಡುವ ದಿನ

ಸಡಗರದಿ ಬರುತಿರಲು ಉಲ್ಲಾಸ ಕಂಡೆ

ಮಧುಮಾಸ ದಿನ ನೀನೆನಗೆ ಒಲಿದಾ ಕ್ಷಣ

ಬಾಳಲ್ಲಿ ಹೊಸದಾದ ಸುಖವನ್ನು ತಂದೆ

ನನ್ನ ಭಾಗ್ಯ ತಾನೆ ಇದು ನಿಜ ಹೇಳು ನೀನು || ೨ ||

ಡಾ. ರಾಜ್‍ಕುಮಾರ್ 

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail