ಅಪಾರ ಕೀರ್ತಿ ಗಳಿಸಿ

ಪಿ. ಬಿ. ಶ್ರೀನಿವಾಸ್ ಆರ್. ಎನ್. ಜಯಗೋಪಾಲ್ ವಿಶ್ವನಾಥ್ - ರಾಮಮೂರ್ತಿ

ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ

ಆಗಸದೆ ತೇಲುತಿದೆ ಮೋಡ

ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ

ಹಸಿ ಹಸಿರು ವನರಾಜಿ ನೋಡ

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು

ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು

ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು

ಅಪಾರ ಕೀರ್ತಿಯೇ

ಮಾತೆ ತುಂಗಭದ್ರೆ ಹರಿಯುತಿಹಳು ಇಲ್ಲಿ

ಮಾನವನ ಪಾಪವನು ತೊಳೆವ ಕಲ್ಪವಲ್ಲ || ೨ ||

ದೇವ ವಿರೂಪಾಕ್ಷ ಈವ ನಮಗೆ ರಕ್ಷ

ಜೀವಿಗೆ ತಾ ನೀಡುವನು ಧರ್ಮದ ದೀಕ್ಷ || ೨ ||

ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯ

ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯ

ಹಕ್ಕಬುಕ್ಕರಾಳಿ ಭವ್ಯತೆಯನು ತಾಳಿ

ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳಿ