ಅಲ್ಲಾ ಅಲ್ಲಾ

ಡಾ|| ರಾಜ್ ಕುಮಾರ್ ಚಿ. ಉದಯಶಂಕರ್ ರಾಜನ್ ನಾಗೇಂದ್ರ

ಅಲ್ಲಾ ಅಲ್ಲಾ ನೀನೇ ಎಲ್ಲಾ

ನಿನ್ನನು ಬಿಟ್ಟರೆ ಗತಿಯಾರಿಲ್ಲ

ನಿನ್ನದೆ ಜಗವೆಲ್ಲ

ಯಾ ಇಲಾಹಿ ಇಲ್ಲಲ್ಲಾ

ಮಹಮ್ಮದ್ ಉರ್ರಂ ರಸೂರುಲ್ಲ

ಅಲ್ಲಾ ಖಯಾಬ್ ಅಲ್ಲಾ ಅಲಲ್ಪಲಾ|| ಪ ||

ಬೀಸುತ ಓಡುವ ತಂಬೆಲರೆಲ್ಲಾ

ಬಾನಲಿ ಹಾರುವ ಹಕ್ಕಿಗಳೆಲ್ಲಾ

ಕಡಲಲಿ ಬೀಸುವ ಅಲೆ ಅಲೆಯಲ್ಲಾ

ಅಲ್ಲಾ ಅಲ್ಲಾ ಎನುತಿದೆಯಲ್ಲಾ|| 1 ||

ನನ್ನ ಬಾಳಲಿ ನೆಮ್ಮದಿ ಇಲ್ಲ

ಎಲ್ಲೆಡೆ ಕತ್ತಲೆ ತುಂಬಿದೆಯಲ್ಲ

ದಾರಿಯ ತೋರುವರಾರು ಇಲ್ಲ

ನೀ ಕೈ ಬಿಟ್ಟರೆ ಬದುಕೆ ಇಲ್ಲ|| 2 ||