ಮಾಡು ಸಿಕ್ಕದಲ್ಲಾ

ಪುರಂದರ ದಾಸರು

ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲ

ಜೋಡು ಹೆಂಡರಿಗಂಜಿ ಓಡಿ ಹೋಗುವಾಗ

ಗೋಡೆ ಬಿದ್ದು ಬಯಲಾಯಿತಲ್ಲ || ಪ ||

ಎಚ್ಚರಗೊಳಲಿಲ್ಲ ಮನವೆ ಹುಚ್ಚನಾದೆನಲ್ಲ

ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು

ಕಿಚ್ಚೆದ್ದು ಹೋಯಿತಲ್ಲ || 1 ||

ಮುಪ್ಪು ಬಂದಿತಲ್ಲ ಪಾಯಸ ತಪ್ಪದೆ ಉಣಲಿಲ್ಲ

ತುಪ್ಪದ ಬಿಂದಿಗೆ ತಿಪ್ಪೆ ಮೇಲೆ

ದೊಪ್ಪನೆ ಬಿತ್ತಲ್ಲಾ || ೨ ||

ಯೋಗವು ಬಂತಲ್ಲಾ ಬದುಕು ವಿಭಾಗವಾಯಿತಲ್ಲ

ಭೋಗಿಶಯನ ಶ್ರೀ ಪುರಂದರ ವಿಠಲನ

ಆಗ ನೆನೆಯಲಿಲ್ಲಾ || ೩ ||