ಹರಿ ಕುಣಿದ ನಮ್ಮ ಹರಿ ಕುಣಿದ || ಪ ||

ಅಕಳಂಕ ಚರಿತ ಮಕರ ಕುಂಡಲಧರ

ಸಕಲ ಪಾಲಿಪ ನಮ್ಮ ಹರಿ ಕುಣಿದ || ೧ ||

ಅರಳೆಲೆ ಮಾಂಗಾಯಿ ಕೊರಳ ಮುತ್ತಿನ ಸರ

ತರಳೆಯರೊಡಗೂಡಿ ಹರಿ ಕುಣಿದ || ೨ ||

ಅಂದುಗೆ ಅರಳೆಲೆ ಬಿಂದುಲಿ ಬಾಪುರಿ

ಚೆಂದದಿ ನಲಿಯುತ್ತ ಹರಿ ಕುಣಿದ || ೩ ||

ಉಟ್ಟ ಪಟ್ಟೆಯ ದಟ್ಟೆ ಇಟ್ಟೆಕಾಂತಿಯ ದಾಪು

ದಿಟ್ಟ ಮಲ್ಲರ ಗಂಡ ಹರಿ ಕುಣಿದ || ೪ ||

ಪರಮ ಭಾಗವತ ಕೇರಿಯೊಳಗಾಡುವ

ಪುರಂದರ ವಿಠಲ ಹರಿ ಕುಣಿದ || ೫ ||

ಭಕ್ತಿ ಪ್ರಧಾನಕೀರ್ತನೆ

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail