ಡೊಂಕು ಬಾಲದ ನಾಯಕರೆ

ಪುರಂದರ ದಾಸರು

ಡೊಂಕು ಬಾಲದ ನಾಯಕರೆ

ನೀವೇನೂಟವ ಮಾಡಿದಿರಿ? || ಪ ||

ಕಣಕ ಕುಟ್ಟೋ ಅಲ್ಲಿಗೆ ಹೋಗಿ

ಹಣಿಕೆ ಇಣುಕಿ ನೋಡುವಿರಿ

ಕಣಕ ಕುಟ್ಟೋ ಒನಕೆಲಿ ಬಡಿದರೆ

ಕುಂಯಿ ಕುಂಯಿ ರಾಗವ ಮಾಡುವಿರಿ || 1 ||

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ

ತಗ್ಗಿ ಬಗ್ಗಿ ನೋಡುವಿರಿ

ಹುಗ್ಗಿ ಮಡೋ ಸೌಟಲಿ ಬಡಿದರೆ

ಕುಂಯಿ ಕುಂಯಿ ರಾಗವ ಮಾಡುವಿರಿ || ೨ ||

ಹಿರೇ ಬೀದಿಲಿ ಓಡುವಿರಿ

ಕರೇ ಬೀದಿಯಲಿ ಹೊರಳುವಿರಿ

ಪುರಂದರ ವಿಠಲರಾಯನ ಈ ಪರಿ

ಪ್ರಿದಾಟದಿ ಸದಾ ಚಲಿಸುವಿರಿ || ೩ ||