ಮಾಯವಾಗಿದೆ ಮನಸು

ಸೋನು ನಿಗಮ್ ಜಯಂತ್ ಕಾಯ್ಕಿಣಿ ಮನೋ ಮೂರ್ತಿ

ಮಾಯವಾಗಿದೆ ಮನಸು ಹಾಗೆ ಸುಮ್ಮನೆ

ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ

ಮೋಹದಲ್ಲಿ ಬೀಳುವ ಮಧುರವಾದ ಭಾವನೆ

ಈಗ ತಾನೇ ಬಂದಿದೆ ನೀಡದೆ ಸೂಚನೆ || ಪ ||

ತುಂಬಿ ಹೋಯಿತೀಗಲೇ ನನ್ನ ದಿನಚರಿ

ಎಲ್ಲ ಪುಟದಲು ಅವಳದೇ ವೈಖರಿ

ಅವಳ ನಿಲುವುಗನ್ನಡಿ ಪುಣ್ಯ ಮಾಡಿದೆ

ರೂಪ ತಾಳಿ ನಿಂತಿದೆ ನನ್ನದೇ ಕಲ್ಪನೆ || ೨ ||

ನನ್ನ ಹಾಡಿನಲ್ಲಿದೆ ಅವಳ ಸಂಗತಿ

ಜಾಹಿರಾಗಲಿ ಜೀವದ ಮಾಹಿತಿ

ಎಲ್ಲೆ ಹೊರಟು ನಿಂತರು ಅಲ್ಲೇ ತಲುಪುವೆ

ಜಾಸ್ತಿ ಹೇಳಲಾರೆನು ಖಾಸಗಿ ಯೋಚನೆ || ೨ ||