ಆಕಾಶ ಭೂಮಿ

ಶ್ರೇಯಾ ಗೋಶಾಲ್ ವಿ. ಶ್ರೀಧರ್ ವಿ. ಶ್ರೀಧರ್

ಆಕಾಶ ಭೂಮಿ ಇಂದು ಒಂದಾದ ಹಾಗಿದೆ

ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ

ತಂದಾನೊ ತಂದಾನೊ ತನುವೆಲ್ಲ ತಂದಾನೊ

ಚಂದಾನೊ ಚಂದಾನೊ ಜಗವೆಲ್ಲ ಚಂದಾನೊ

ಮನಸೆಲ್ಲ ಸಂತಿಂಗ್ ಸಂತಿಂಗ್ ಉಯ್ಯಾಲೆ ತೂಗಿದೆ || ಪ ||

ನಾ ಬರುವ ದಾರಿಯಲ್ಲಿ ಹೂ ಬಳುಕುತಾವ ನೋಡ

ನಾಚಿ ನಿಂತೆ ನಾನು ಅವು ಹಾಡಿತೊಂದ ಹಾಡ

ಹಾಡಲು ನಾನು ಜೊತೆ ಜೊತೆಗೆ

ಅರಳಿತು ಮನವು ಒಳಗೊಳಗೆ

ನದಿಯಂತೆ ಹರಿಯುವೆನು ಮಂಜಂತೆ ಮುಸುಕುವೆನು

ತಿರುಗು ಈ ಭೂಮಿಯ ನೋಡಲು ಚಂದ್ರಮಕೆ ಹಾರುವೆನು

ಮನದಲ್ಲೆ ಮುಗಿಲನು ಸೇರಿ ಭುವಿಗೆ ಕೈ ಚಾಚುವೆನು || ೧ ||

ಸೌಂದರ್ಯ ರಾಗ ಲಹರಿ ಬಂತೆನ್ನ ಮನಕೆ ಮರಳಿ

ತಲೆದೂಗುವಂತಹ ನಾದ ತಂಗಾಳಿ ಬೀಸೊ ರವಳಿ

ಅಲೆ ಅಲೆ ಮೇಲೆ ಮೇಲೆ ಬರುತಿರೊ ಹಾಗೆ

ಸುಖ ದುಃಖವೆರಡು ಜೀವನ ಧಾರೆ

ಮುಸ್ಸಂಜೆ ಮಾತಲ್ಲಿ ಈ ಜೀವ ಹಗುರಾಯ್ತು

ಕೋಗಿಲೆಯ ಹಾಡಂತೆ ಆ ಮಾತು ಇಂಪಾಯ್ತು

ಬಾವಗಳ ಸರಿಗಮ ಸೇರಿ ಸೊಗಸಾದ ಹಾಡಾಯ್ತು || ೨ ||