ತಿರುಪತಿ ವೆಂಕಟರಮಣಾ

ಪುರಂದರ ದಾಸರು

ತಿರುಪತಿ ವೆಂಕಟರಮಣಾ

ನಿನಗೇತಕೆ ಬಾರದು ಕರುಣಾ || ಪ ||

ನಂಬಿದೆ ನಿನ್ನಯ್ ಚರಣಾ

ಪರಿಪಾಲಿಸಬೇಕೋ ಕರುಣಾ || ಅ.ಪ.||

ಅಳಗಿರಿಯಲ್ಲಿ ಬಂದ ಸ್ವಾಮಿ

ಅಂಜನಗಿರಿಯಲಿ ನಿಂದ

ಕೊಳಲು ಧ್ವನಿಯದೋ ಚೆಂದ

ನಮ್ಮ ಕುಂಡಲ ರಾಯ ಮುಕುಂದ || ೧ ||

ಬೇಟೆಯಾಡುತ ಬಂದ ಸ್ವಾಮಿ

ಬೆಟ್ಟದ ಮೇಳೆ ನಿಂದಾ

ವೀಟುಗಾರ ಗೋವಿಂದಾ

ಅಲ್ಲಿ ಜೇನು ಸಕ್ಕರೆಯನು ತಿಂದಾ || ೨ ||

ಮೂಡಲಗಿರಿಯಲಿ ನಿಂತಾ

ಮುದ್ದು ವೆಂಕಟಪತಿ ಬಲವಂತಾ

ಈಡಿಲ್ಲ ನಿನಗೆ ಶ್ರಿಕಾಂತಾ

ಈರೇಳು ಲೋಕಕನಂತಾ || ೩ ||

ಆಡಿದರೆ ಸ್ಥಿರವಪ್ಪ

ಅಬದ್ಧಗಳಾಡಲು ಒಪ್ಪ

ಬೇಡಿದ ವರಗಳನಿಪ್ಪ

ನಮ್ಮ ಮೂಡಲಗಿರಿ ತಿಮ್ಮಪ್ಪ || ೪ ||