ದಾರಿ ಯಾವುದಯ್ಯಾ

ಪುರಂದರ ದಾಸರು

ದಾರಿ ಯಾವುದಯ್ಯಾ ವೈಕುಂಠಕೆ ದಾರಿ ತೋರಿಸಯ್ಯಾ

ದಾರಿ ಯಾವುದಯ್ಯಾ ದಾರಿ ತೋರಿಸಯ್ಯಾ || ಪ ||

ಆಧಿ ಮೂರುತಿ ನಿನ್ನ ಪಾದ ಸೇರುವುದಕ್ಕೆ || ಅ.ಪ. ||

ಪಾಪ ಪೂರ್ವದಲ್ಲಿ ಮಾಡಿದುದಕೆ ಲೇಪ ವಾಗಿದೆ ಕರ್ಮ

ಈ ಪರಿ ಯಿಂದಲಿ ನಿನ್ನ ನೆನಿಸಿಕೊಂಬೆ

ಶ್ರೀಪತಿ ಸಲಹೋ ಭೂಪ ನಾರಾಯಣ || 1 ||

ಬಲು ಭವ ದನುಭವದಿ ಕತ್ತಲೆಯೊಳು ಬಲು ಅಂಜುತ ನಡುಗಿ

ಬಳಲುತ ತಿರುಗಿದೆ ದಾರಿಯ ಕಾಣದೆ

ಹೊಳೆವಂಥ ದಾರಿಯ ತೋರೋ ನಾರಾಯಣ || ೨ ||

ಇನ್ನೂ ಜನಿಸಲಾರೇ ಭೋಮಿಯ ಮೇಲೆ ನಿನ್ನ ದಾಸನಾದೆನೋ

ಪನ್ನಂಗ ಶಯನ ಶ್ರೀ ಪುರಂದರವಿಠಲಾ

ಇನ್ನು ಪುಟ್ಟಿಸದಿರು ಎನ್ನ ನಾರಾಯಣ || ೩ ||