ಅನುರಾಗ ಅರಳೊ ಸಮಯ

ಕಾರ್ತಿಕ್ ಕವಿರಾಜ್ ವಿ. ಶ್ರೀಧರ್

ಅನುರಾಗ ಅರಳೊ ಸಮಯ

ಮನಸುಗಳು ಮಾತಾಡೊ ಸಮಯ

ಯಾರು ಯಾರ ದಾರಿಯನ್ನು ಕಾಯೊ ಸಮಯ

ಮೊಗ್ಗು ಮೆಲ್ಲ ಹಿಗ್ಗಿ ಹೂವಾಗೊ ಸಮಯ

ಕದ್ದುಕೊಂಡರು ಯಾದೊ ನನ್ನ ಹೃದಯ

ಹಿಂದೆ ಎಂದು ಕಂಡೆ ಇಲ್ಲ ಇಂಥ ಖುಷಿಯ

ಪ್ರೀತಿನಾ ಇದು ಪ್ರೀತಿನಾ ಇದು,

ನನ್ನಲ್ಲೆ ನಾನೆ ಇಲ್ಲ ಈಗ ಯಾಕೊ ಯಾಕೊ ಯಾಕೋ || ಪ ||

ಚಲಿಸೊ ಓ ಬೆಳ್ಳಿ ಮೋಡ ಇಳಿದು ಬಾ

ನಿನ್ನ ಕೂಡ ಕುಳಿತು ಮಾತಾಡೊ ಆಸೆ ಆಗಿದೆ

ಅವಳ ಅಂದಾನ ಕುರಿತು ಮನಸು ಬರೆದಂತ ಕವಿತೆ

ಬಂದು ನೀ ಕೇಳಬಾರದೇ?

ಇನ್ನು ಎಂದು ನೆರಳ ಹಾಗೆ ನಾನು ಇವಳ

ಜೊತೆಯಲೆ ಇರಲ ಅನುಗಾಲ

ನಡೆ ನುಡಿ ಸರಳ ಮೆಚ್ಚಿಕೊಂಡೆ ಬಹಳ

ನನಗೆ ಅಂತ ಹುಟ್ಟಿಬಂದ ತಾರೆ ಇವಳಾ?

ಪ್ರೀತಿನಾ ಇದು ಪ್ರೀತಿನಾ ಇದು,

ನನ್ನಲ್ಲೆ ನಾನೆ ಇಲ್ಲ ಈಗ ಯಾಕೊ ಯಾಕೊ ಯಾಕೋ || ೧ ||

ನಮ್ಮ ಈ ಪುಟ್ಟ ಗೂಡು ಇಲ್ಲಿ ಪ್ರೀತಿಯ ಹಾಡು

ಗುನುಗೊ ಈ ಸಮಯ ಹೀಗೆ ಇರಲಿ

ಜೊತೆಗೆ ನಡೆವಾಗ ಹೀಗೆ ಬಾಳು ಓಂದಾದ ಹಾಗೆ

ಅನಿಸೊ ಈ ಸಮಯ ಎಂದು ಸಿಗಲಿ

ಮಾತು ಮರೆತು ಹೋಗಿದೆ ಮನಸು ಕಳೆದು ಹೋಗಿದೆ

ಕಣ್ಗಳಂತೆ ನೋಡಲು ಹೃದಯ ಕರೆಯಬಾರದೆ

ನಿನ್ನ ನಾನು ನೋಡದೆ ಒಂದು ಕ್ಷಣ ಜಾರದೆ

ಸಮಯ ಮೀರಿ ಹೋಗೊ ಮುನ್ನ ಹೇಳು ಆಸೆಯ|| ೨ ||